Select Size
Quantity
Product Description
ಯುಗಾಂತರ ಕಲಿದ್ವಾಪರ ಯುಗಗಳ ಸ್ಥಿತ್ಯಂತರದಲ್ಲಿ ಉಂಟಾದ ಸಂಘರ್ಷಗಳ ಮೇಲೆ ಬೆಳಕುಚೆಲ್ಲುವ ಕಥಾ ಹಂದರವನ್ನು ಒಳಗೊಂಡ ಕಾದಂಬರಿ. ಮಹರ್ಷಿ ವೇದವ್ಯಾಸರು ಶ್ರೀಕೃಷ್ಣ ನಿರ್ಯಾಣ, ಯಾದವೀಕಲಹಗಳನ್ನು ಕಂಡು ಕಲಿಯುಗದ ಭಯಾನಕ ದಿನಗಳನ್ನು ಊಹಿಸಿ ತಾತ್ಕಾಲಿಕವಾಗಿಯಾದರೂ ತಾನಿದನ್ನು ನಿಯಂತ್ರಿಸಲು ಸಾಧ್ಯವೆ ಎಂದು ಪ್ರಯತ್ನಿಸುವ ಕಥೆ.
ಆಳುವ ಅರಸರು ಸಮರ್ಥರಾದರೆ ಕಾಲವನ್ನು ಕಟ್ಟಬಲ್ಲರು ಎಂದು ಗ್ರಹಿಸಿ ಮುಂದಿನ ಒಂದು ಶತಮಾನದಷ್ಟು ಕಾಲ ಯುಧಿಷ್ಠಿರ,ಪರೀಕ್ಷಿತ,ಜನಮೇಜಯರನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಯತ್ನ,ಈ ಮಧ್ಯೆ ಅವರು ಕಂಡ ಅನುಭವಗಳನ್ನು ದಾಖಲಿಸುತ್ತಾ ಸಾಗಿ ಮಹಾಭಾರತದಂತಹ ಬೃಹತ್ ಕಾವ್ಯ ನಿರ್ಮಾಣಗೊಂಡದ್ದು ,ಪರೀಕ್ಷಿತ ಜನಮೇಜಯರಿಗೆ ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಾ ಪ್ರಜಾಜನ ಕೆಟ್ಟುಹೋಗದಂತೆ ಪ್ರಯತ್ನಿಸುವುದು ಇಲ್ಲಿಯ ಮುಖ್ಯ ವಿಚಾರ.
ಸಮರ್ಥ ಆಡಳಿತಗಾರನಿಗೆ ,ಸಮರ್ಥ ಸಲಹೆಗಾರನ ಸಹಾಯಕನಿದ್ದರೆ ಕಲಿಯನ್ನೂ ನಿಯಂತ್ರಿಸಬಹುದು ಎಂಬುದು ಇಡೀ ಕಾದಂಬರಿಯ ಹೂರಣ.ಅರಸರು ಧರ್ಮದ ಹಾದಿಯಲ್ಲಿ ನಡೆದರೆ ಪ್ರಜೆಗಳೂ ನಡೆಯುತ್ತಾರೆ..”ರಾಜಾ ಕಾಲಸ್ಯ ಕಾರಣಂ” ಎಂಬ ಸತ್ಯವನ್ನು ಸಾರುವುದು ಯುಗಾಂತರ ಕಾದಂಬರಿಯ ಅಂತರ್ನಿಹಿತ ಮೌಲ್ಯ. ಮಹಾಭಾರತ,ಶ್ರೀಮದ್ಭಾಗವತ,ಹರಿವಂಶ ಮುಂತಾದ ಪುರಾಣಗಳ ಪರಾಮರ್ಶೆಯೊಂದಿಗೆ ಈ ಕಾದಂಬರಿ ರಚಿಸಲ್ಪಟ್ಟಿದೆ. ಪುರಾಣಲೋಕದಲ್ಲಿ ಒಮ್ಮೆ ಮಾತ್ರ ಘಟಿಸಿದ ಸಶರೀರ ಸ್ವರ್ಗಾರೋಹಣದ ಚಿತ್ರಣ ಮನೋಜ್ಞವಾಗಿ ವರ್ಣಿತವಾಗಿದೆ.
ISBN-13
9788197438431
Number of Pages
258
Publication Year
2024
Author
D S Shridhara
Binding
Soft Bound
Publisher
Ayodhya Publications
Weight
300 GMS
Length
22 CMS
Language
Kannada