Product Description
೧೯೭೩ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ವಿ. ಸೀತಾರಾಮಯ್ಯನವರು ಕವಿಗಳಾಗಿ, ಪ್ರಬಂಧಕಾರರಾಗಿ, ವಿಮರ್ಶಕರಾಗಿ ಖ್ಯಾತರಾದವರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರವಲ್ಲದೆ ಸಾಹಿತ್ಯ ಮತ್ತು ಸಾಹಿತ್ಯೇತರ ಕ್ಷೇತ್ರಗಳಲೂ ಕೃಷಿ ಮಾಡಿ ‘ಸವ್ಯಸಾಚಿ’ ಎಂಬ ಮಾತಿಗೆ ಹೊಸ ಅರ್ಥವನ್ನೇ ಮೂಡಿಸಿದವರು. ಸುಂದರವಾಗಿ ಪುಸ್ತಕಗಳನ್ನು ಅಚ್ಚು ಹಾಕಿಸುವ ಪ್ರವೃತ್ತಿಯನ್ನು ಬೆಳೆಸಿದ್ದಲ್ಲದೆ, ಹೊಸ ಯೋಜನೆಗಳ ಪ್ರವರ್ತಕರೂ ಆಗಿದ್ದ ಅವರು ವಿದ್ವತ್ತಿನ ಹಿರಿಮೆ-ಗರಿಮೆಗಳ ಪ್ರತೀಕವೂ ಆಗಿದ್ದರು. ‘ಎಮ್ಮೆ ಮನೆಯಂಗಳದಿ’ ಎಂಬ ಹಾಡಿನಿಂದ ಕನ್ನಡಿಗರ ಹೃನ್ಮನಗಳಲ್ಲಿ ನೆಲೆಸಿಹೋದಂಥವರು ಅವರು.