Product Description
ಸಾಹಿತಿಗಳು ಅರ್ಥಶಾಸ್ತ್ರವನ್ನು ಬೋಧಿಸಲು ಪ್ರಾರಂಭಿಸಿದರೆ ಎಷ್ಟು ರಸವತ್ತಾಗಿರುತ್ತದೆ ಅಂತ
... ಹರಿಯುವ ನೀರಿಗೆ ಮೌಲ್ಯವಿದೆ. ಬೆಳಗುವ ಸೂರ್ಯನಿಗೆ ಮೌಲ್ಯವಿದೆ. ನನಗೆ ಮೌಲ್ಯವಿದೆ. ನಿಮಗೆ ಮೌಲ್ಯವಿದೆ. ಜಗತ್ತಿನ ಎಲ್ಲ ಜೀವಿಗಳಿಗೂ ಗೌರವಿಸಿದರೆ ನಮ್ಮ ಬದುಕೂ ಮೌಲಿಕವಾಗಿರುತ್ತದೆ...
ಎಷ್ಟೊಂದು ಅರ್ಥಪೂರ್ಣವಾಗಿದೆ ನೋಡಿ...
... ಅರ್ಥಶಾಸ್ತ್ರದ ಉಪನ್ಯಾಸಕನಾಗಿ ಹಲವಾರು ವರ್ಷಗಳಿಂದ ಹಣದ ಬಗ್ಗೆ ಬರೆದಿರುವ ಸಾಕಷ್ಟು ಪಠ್ಯ ಪುಸ್ತಕಗಳನ್ನು ಓದಿದ್ದೇನೆ. ಆದರೆ ಅರವಿಂದರ ಈ ಕೃತಿ ನನಗೆ ತೀರಾ ಭಿನ್ನವಾದಂತಹ ಅನುಭವವನ್ನು ನೀಡಿದೆ. ಇದು ಕಾದಂಬರಿ ರೂಪದಲ್ಲಿರುವ ಹಣದ ವಿಶ್ವಕೋಶ ಅಂತ ಹೇಳಿದರೆ ಅತಿಶಯೋಖ್ಷಿ ಆಗಲಾರದು. ಯಾಕೆಂದರೆ 'ಹಣ'ದಂತಹ ಬಹಳ ಮುಖ್ಯವಾದ, ಆದರೆ ಅಷ್ಟೇ 'ಡ್ರೈ' ಆದ, ಹೆಚ್ಚಿನವರು ಅದರ ಬಗ್ಗೆ ತಮಗೆಲ್ಲ ತಿಳಿದಿದೆ. ಇನ್ನೇನೂ ಅದರ ಬಗ್ಗೆ ಕಲಿಯಲಿಕ್ಕೆ ಇಲ್ಲ ಎಂದು ಅಸಡ್ಡೆ ಮಾಡುವ ವಿಷಯದ ಬಗ್ಗೆ, ಒಂದು ತಾತ್ವಿಕ ಚೌಕಟ್ಟಿನ ಒಳಗೆ, ಬಹಳ ರಸವತ್ತಾದ ಚರ್ಚೆ ಮತ್ತು ಸಂವಾದಗಳ ಮೂಲಕ ಅದರ ವಿವಿಧ ಆಯಾಮಗಳ ಬಗ್ಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತಿಳಿಸಿಕೊಡುತ್ತಾ ಹೋಗುವ ಬಗೆ, ನಿಜಕ್ಕೂ ಅಚ್ಚರಿ ಮೂಡಿಸುತ್ತದೆ