Product Description
ಪಶುಪಾಲನೆಗೆ ಸಂಬಂಧಿಸಿದಂತೆ ಉಪೇಕ್ಷೆಗೊಳಗಾಗಿದ್ದ ಹಲವು ವಿಷಯಗಳು ಈ ಪುಸ್ತಕದಲ್ಲಿವೆ. ಹಸುಗಳಿಗಾಗಿ ಕೊಟ್ಟಿಗೆ ನಿರ್ಮಾಣದಿಂದ ಹಿಡಿದು, ಮೇವಿನ ಸಂಗ್ರಹಣೆ, ಕರುಗಳ ಪಾಲನೆ, ಪಶುಗಳನ್ನು ಕಾಡುವ ನಾನಾ ರೋಗಗಳು, ರೋಗರುಜಿನಗಳ ವಿರುದ್ಧ ವಹಿಸಬೇಕಾದ ಎಚ್ಚರ, ರೋಗ ಬಂದಾಗ ನೀಡಬೇಕಾದ ಚಿಕಿತ್ಸೆ ಹೀಗೆ ಅನೇಕ ಉಪಯುಕ್ತ ವಿಷಯಗಳು ಈ ಕೃತಿಯಲ್ಲಿವೆ. ಹೆಚ್ಚು ಹಾಲು ನೀಡುವ ಅಷ್ಟೇ ದುಬಾರಿ ಆಹಾರ ಮತ್ತು ಪರಾಮರಿಕೆಯನ್ನು ಬೇಡುವ ಮತ್ತು ಹಾಲು ಕಡಿಮೆ ನೀಡಿದರೂ ಸಿಕ್ಕಿದ ಹುಲ್ಲು ಸೊಪ್ಪು ಮೇಯ್ದುಕೊಂಡು ರೈತರ ಕೃಷಿ ಕಾರ್ಯಗಳಿಗೆ ಒದಗಿಬರುವ, ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ದೇಸೀ ತಳಿಗಳು ಹಾಗೂ ಎಮ್ಮೆಗಳ ಕುರಿತ ಮಾಹಿತಿ ಸಹ ಈ ಪುಸ್ತಕದಲ್ಲಿದೆ.