Product Description
೧೯೬೮ರಲ್ಲಿ ತಮ್ಮ ಸಣ್ಣ ಕಥೆಗಳ ಸಂಕಲನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ ಮಾಸ್ತಿಯವರು ‘ಕನ್ನಡದ ಆಸಿ’ ಎಂದೇ ವಿ. ಕೃ. ಗೋಕಾಕರಿಂದ ಪ್ರಶಂಸೆಗೆ ಒಳಗಾದವರು. ಅಧಿಕಾರಷಾಹಿಯ ಆಡಳಿತಾತ್ಮಕ ಅನುಭವಗಳನ್ನು ತಮ್ಮ ಸಾಹಿತ್ಯ ಸ್ಟೃಗೆ ಮೂಲ ದ್ರವ್ಯವಾಗಿ ಬಳಸಿಕೊಂಡ ಅವರು ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಅವಿಸ್ಮರಣೀಯವಾದ ಕಾಣಿಕೆಗಳನ್ನು ಸಲ್ಲಿ¹ದ್ದಾರೆ. ಕನ್ನಡಕ್ಕೆ ‘ಜ್ಞಾನಪೀಠ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಹಿರಿಮೆಯ ಲೇಖಕರೂ ಅವರಾಗಿದ್ದಾರೆ. ಸರಳವಾದ ಮಾತುಗಳಲ್ಲಿ ಸರಸವಾದ ಸಾಹಿತ್ಯಾನುಭವವನ್ನು ತಂದುಕೊಡುವ ಅವರ ಸಮೃದ್ಧ ಕೊಡುಗೆ ಕನ್ನಡಿಗರಿಗೆ ಸಂತೋಷದ ಜೊತೆಗೆ ಬೆರಗನ್ನೂ ಉಂಟುಮಾಡುವಂಥದು. ಕವಿ, ವಿಮರ್ಶಕ ಡಾ. ಜಿ. ಎಸ್. ಸಿದ್ಧಲಿಂಗಯ್ಯ ಈ ಪುಸ್ತಕದ ಲೇಖಕರು.