Quantity
Product Description
Rukumani Rukumani | Vikasa Negiloni
ಪ್ರಿಯ ವಿಕಾಸ್, ನಿಮ್ಮ ಕತೆಗಳನ್ನು ನಾನು ಕತೆಗೋಸ್ಕರ ಮಾತ್ರವೇ ಓದುವುದಿಲ್ಲ. ಅವು ನನಗೆ ಕಾಣಿಸುವ ಮತ್ತೊಂದು ಲೋಕ ಮತ್ತು ಅವು ಮೆತ್ತಗೆ ನನ್ನನ್ನು ಚಿವುಟುವ ಪರಿ ನನಗೆ ಇಷ್ಟ. ನೀವು ಕತೆಗಳನ್ನು ಬರೆಯುವಾಗ ಒಂದೇ ಉಸಿರಿನಲ್ಲಿ ಬರೆಯುತ್ತೀರಿ ಹಾಗೂ ಅಷ್ಟು ಹೊತ್ತು ಪಾತ್ರಗಳನ್ನು ನಿಮ್ಮೊಳಗೆ ತಂದುಕೊಳ್ಳುತ್ತೀರಿ ಎಂಬುದು ನನಗೆ ಗೊತ್ತು.
ಈ ಕಥಾಸಂಕಲನದ ಎಲ್ಲ ಕತೆಗಳು ಹೊಸದಾಗಿವೆ. ಈ ಕಾಲದಲ್ಲಿ ಬರುತ್ತಿರುವ ಕತೆಗಳಿಗಿಂತ ಭಿನ್ನವಾಗಿವೆ. ಈಗ ಬರೆಯುತ್ತಿರುವ ನಿಮ್ಮ ವಯೋಮಾನದ ಕತೆಗಾರರೆಲ್ಲ ಒಂದಲ್ಲ ಒಂದು ವಸ್ತುವಿನ ಹಿಂದೆ ಬಿದ್ದಿದ್ದಾರೆ. ಅನೇಕರು ಪ್ರಶಸ್ತಿ, ಕಥಾಸ್ಪರ್ಧೆಗಳಿಗೆ ಬಲಿಯಾಗಿದ್ದಾರೆ. ಉಳಿದ ಕೆಲವರು ಸಿದ್ಧಾಂತಗಳಿಗೆ ಜೋತುಬಿದ್ದಿದ್ದಾರೆ. ಇಂಥದ್ದರ ನಡುವೆ ಜೀವಕ್ಕೆ ತಾಕುವಂಥ ಕತೆಗಳಿಗೋಸ್ಕರ ಹಂಬಲಿಸುವ ಎಲ್ಲರ ಪಾಲಿಗೂ ನೀವು ಕಥಾಸರಿತ್ಸಾಗರ.
ನಿಮ್ಮ ಕತೆಯನ್ನು ಓದುವಾಗ ನಾನು ಅದು ಚೆನ್ನಾಗಿದೆಯೋ ಇಲ್ಲವೋ ಅಂತ ಅಲೋಚಿಸುವುದಿಲ್ಲ. ಇದೊಂದು ಶ್ರೇಷ್ಠಕತೆ ಅಂತ ಅಂದುಕೊಳ್ಳುವುದಿಲ್ಲ. ಈ ಕತೆಯ ಮೂಲಕ ನೀವು ಘನವಾದ ಏನನ್ನೋ ಹೇಳಲು ಹೊರಟಿದ್ದೀರಿ ಅಂತ ಹುಡುಕಾಡುವುದಿಲ್ಲ. ನಿಮ್ಮ ಸಹಜವಾದ ನೋಟ, ಕತೆಗಾರನ ಒಳನೋಟ, ಯಾರಿಗೂ ಹೇಳಲಾಗದ ಸೂಕ್ಷ್ಮ ಪಾತ್ರಗಳ ಅಂತರಂಗಕ್ಕೆ ಮಾತ್ರ ಗೊತ್ತಿರುವ ಸತ್ಯ-ಇವೆಲ್ಲ ನಿಮ್ಮ ಕತೆಯ ಮೂಲಕ ನನ್ನನ್ನು ತಾಕುತ್ತವೆ. ನೀವು ಕತೆಗಾರರ ಕತೆಗಾರ. ನಿಮ್ಮ ಕತೆ ಓದಿದಾಗ ನಾನು ಆ ಪಾತ್ರವನ್ನು ಮತ್ತೆ ಕೆತ್ತಬೇಕು ಅನ್ನಿಸುತ್ತದೆ. ಇದು ಒಳ್ಳೆಯ ಕೃತಿಗಳ ಲಕ್ಷಣ.
ಈ ಕತೆಗಳು ಚಿರಾಯುವಾಗಲಿ. ನಿಮ್ಮೊಳಗಿನ ಕತೆಗಾರ ಇಷ್ಟೇ ತೀವ್ರವಾಗಿ ಬದುಕುತ್ತಿರಲಿ, ನಿಮಗೆ ಸಿಗುವ ಪಾತ್ರಗಳು ನಿಮಗೆ ಶಾಪ ಹಾಕಿದರೂ ಸರಿಯೇ, ನಿಮ್ಮ ಕತೆಗಳಲ್ಲಿ ಏದುಸಿರು ಬಿಡುತ್ತಾ ಓಡಾಡುತ್ತಿರಲಿ.
Binding
Soft Bound
ISBN-13
9789348262707
Number of Pages
128
Publication Year
2025
Publisher
Ankitha Pusthaka
Author
Vikasa Negiloni
Height
1 CMS
Length
22 CMS
Weight
100 GMS
Width
14 CMS
Language
Kannada