Product Description
ಕನ್ನಡ ಪತ್ತೆದಾರಿ ಕಾದಂಬರಿ ಸಾಹಿತ್ಯ ಪ್ರಕಾರಕ್ಕೆ ಹೊಸ ತಿರುವು, ಹೊಸ ಗೌರವ ತಂದುಕೊಟ್ಟ ದಿವಂಗತ ಎಂ. ರಾಮಮೂರ್ತಿ ಅವರ ಪತ್ತೆದಾರಿ ಕಾದಂಬರಿಗಳು ಅತ್ಯಂತ ಸಹಜವಾಗಿ, ಕುತೂಹಲಭರಿತವಾಗಿ, ಅತ್ಯಂತ ರೋಚಕವಾಗಿ ಮೂಡಿಬಂದವು. ಇದ್ದಕ್ಕಿದ್ದ ಹಾಗೆಯೇ ಅವತರಿಸಿ ಕನ್ನಡ ಪತ್ತೆದಾರಿ ಓದುಗರನ್ನು ಬಹಳವಾಗಿ ಆಕರ್ಷಿದವು. ಕನ್ನಡಿಗರಿಗೆ ಅತಿ ಪರಿಚಿತವಾದ ಹೆಸರು- ಪ್ರದೇಶಗಳು, ವಿಭಿನ್ನ ಕಥಾವಸ್ತುಗಳು, ಅತಿ ಸಹಜವಾಗಿ ಕಾಣುವ ಪಾತ್ರಗಳು, ಪತ್ತೆದಾರಿ ಕೆಲಸಗಳು, ಒಂದಿಷ್ಟೂ ಅತಿರೇಕವಿಲ್ಲದ ಆಗು-ಹೋಗುಗಳು-ಈ ಕಾದಂಬರಿಗಳನ್ನು ವಿಶೇಷವೆನ್ನಿಸುವಂತೆ ಮಾಡುತ್ತವೆ.
'ಕಾಲುವೆಮನೆ'ಯ ಸದ್ದುಗದ್ದಲವಿಲ್ಲದ ಕೊಲೆಗಳು; 'ರಾಜರಹಸ್ಯ'ದ ತಾಂತ್ರಿಕ ವಿಶೇಷಗಳು-ಆಕಸ್ಮಿಕಗಳು; 'ಜುಲೇಕ' ಕಾದಂಬರಿಯ ರಸಭರಿತ ಆಗುಹೋಗುಗಳು, ತಣ್ಣಗೆ ಜರುಗುವ ಬಿಸಿಬಿಸಿ ಘಟನೆಗಳು-ಇವನ್ನೆಲ್ಲ ಈ ಕಾದಂಬರಿಗಳನ್ನು ಓದಿಯೇ ಅನುಭವಿಸಬೇಕು. ಸುಲಲಿತ ಶೈಲಿ, ಅತಿ ಸಹಜ ಪಾತ್ರಗಳು, ಪೊಲೀಸ್-ಪತ್ತೆದಾರ ಚರ್ಚೆ, ಕಾನೂನಿನ ಚೌಕಟ್ಟಿಗೊಳಪಟ್ಟ ಪೊಲೀಸ್ ನಡವಳಿಕೆ. ಪತ್ತೆದಾರಿ ಲೇಪದ ಸಾಮಾಜಿಕ ಕಾದಂಬರಿಗಳ ಹಾಗೆ ಇವು ಮನಸೆಳೆಯುತ್ತವೆ.