Quantity
Product Description
ಪುಸ್ತಕದ ಬಗ್ಗೆ: ಕಪಿಲೆ ಕಂಡ ಕಥೆಗಳು ಅಕ್ಷರಸ್ಥರಲ್ಲದ ನಮ್ಮ ಹಳ್ಳಿಯ ಜನ, ಅದರಲ್ಲೂ ಹೆಣ್ಮಕ್ಕಳು ತಮ್ಮ ಬದುಕಿನ, ಕಷ್ಟಗಳ ಮಾತಾಡುವಾಗ “ಅಯ್ಯೋ ಕುಸ್ಮಾ, ನನ್ ಕತೆ ಬೆಳಗಾನ ಯೋಳುದ್ರೂ ಮುಗಿಯಲ್ಲ, ನೀ ಒಂದ್ ಬುಕ್ಕೇ ಬರ್ದ್ಬುಡಬೋದು” ಅಂತಿರ್ತಾರೆ. ಅವರ ಪಾಲಿಗೆ ಕತೆಗಳೆಂದರೆ ಕಷ್ಟಗಳು. ಅಲ್ಲವೆನ್ನಲಾಗದು. ಅವರೊಳಗೆಲ್ಲಾ ಕತೆ ಇದೆ. ಕತೆ ಎಂಬುದು ಒಳಲೋಕ ಬಗೆದಾಗ ಕಾಣುವ ನೋಟ. ಬದುಕು ಕೊಡುವ ಆಘಾತಗಳಿಂದ ಕಾಣುವ ಬೆಳಕನ್ನೂ, ಕಾಣೆಯನ್ನೂ ದೀಪವಾಗಿಸಿ ದಾಟಿಸಲು ಕಂಡುಕೊಂಡ ದಾರಿ. ಕತೆ, ನಮ್ಮನ್ನು ಈ ಜಗತ್ತಿನಲ್ಲಿರುತ್ತಲೇ, ಈ ಜಗತ್ತಿನಿಂದ ಕೆಲಹೊತ್ತಾದರೂ ಬೇರೆಡೆಗೆ ಒಯ್ಯುವ ಮಾಯಾಚಾಪೆ. ಒಂದು ದಿವೌಷಧ. ಕಲೆ ಮತ್ತು ಅಧ್ಯಾತ್ಮ ಎರಡೂ, ಮನುಷ್ಯರ ವೈಯಕ್ತಿಕ ಸಂಕಟಗಳನ್ನು ಲೋಕದ ಪ್ರಶ್ನೆಗಳಾಗಿಸುವ, ಉತ್ತರ ಹುಡುಕುವ, ಸಂಕಟಗಳನ್ನು ಸಾಂತ್ವನವಾಗಿಸುವ ಪ್ರಕ್ರಿಯೆಗಳು. ಅಂತಹ ಕತೆಗಳು ಎಲ್ಲರೊಳಗೂ ಇರುತ್ತವೆ. ಕೆಲವರು ಬರೆಯುತ್ತಾರಷ್ಟೇ! ಲೇಖಕರ ಬಗ್ಗೆ: ಕುಸುಮಾ ಆಯರಹಳ್ಳಿ ಕುಸುಮಾ ಆಯರಹಳ್ಳಿ ಅವರು ನಂಜನಗೂಡಿನವರು ಮತ್ತು ಮೈಸೂರು ಜಿಲ್ಲೆಯ ಆಯರಹಳ್ಳಿ ಗ್ರಾಮದವರು. ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ ಮತ್ತು ಆಕಾಶವಾಣಿ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. ಅವರ ಕಾವ್ಯನಾಮ ಕುಸುಮಬಾಲೆ. ಅವರು ಹಲವಾರು ಧಾರಾವಾಹಿಗಳಿಗೆ ಸಂಭಾಷಣೆಗಳನ್ನು ಬರೆದಿದ್ದಾರೆ
Author
P Kusuma Ayarahalli
Binding
Soft Bound
ISBN-13
9789348262981
Number of Pages
200
Publication Year
2025
Publisher
Ankitha Pusthaka
Height
2 CMS
Length
22 CMS
Weight
200 GMS
Width
14 CMS
Language
Kannada