Quantity
Product Description
ಆರಾಧನಾ ಪರಂಪರೆಯನ್ನು ವೈಭವೀಕರಿಸದೆ ವಸ್ತುಸ್ಥಿತಿಯೊಂದಿಗೆ ಸತ್ಯದ ಹಲವು ಒಳನೋಟಗಳನ್ನು ಈ ಕೃತಿಯಲ್ಲಿ ನವೀನ್ ಸೂರಿಂಜೆ ನೀಡಿದ್ದಾರೆ. ಜನಪದ ಸಂಶೋಧನೆ, ಸಂಸ್ಕೃತಿ ಚಿಂತನೆ ಎನ್ನುವುದು ಕೇವಲ ವಿವರಣೆ ಗಳ ದಾಖಲಾತಿ ಅಲ್ಲ. ಈ ಹಿಂದಿನ ಅಧ್ಯಯನಕಾರರ ಮಿತಿಗಳನ್ನು ಅರ್ಥೈಸಿಕೊಂಡು ಅದನ್ನು ದಾಟಿ, ಇನ್ನಷ್ಟು ವಿಶ್ಲೇಷಣೆ, ಪ್ರಶ್ನೆ ಮತ್ತು ಹಲವು ತರ್ಕಗಳನ್ನು ಮುಂದಿಡುವುದು ಎಂದರ್ಥ. ಈ ಕೆಲಸವನ್ನು 'ಸತ್ಯೋಲು' ಕೃತಿ ಯಶಸ್ವಿಯಾಗಿ ನಿರ್ವಹಿಸಿದೆ. ಕೊರಗರು, ಹಿಂದುಳಿದ ಸಮುದಾಯಗಳು, ಮಲೆಕುಡಿಯರು, ಮುಸ್ಲಿಮರು, ಕ್ರೈಸ್ತರೊಂದಿಗೆ ತುಳಿತಕ್ಕೆ ಒಳಗಾದ ಸಮುದಾಯಗಳ ಆಚರಣೆಯಲ್ಲಿರುವ ಕೆಲವು ಕಟ್ಟುಪಾಡುಗಳನ್ನು ಪ್ರಶ್ನಿಸಿ, ಸಮಾನತೆಯ ಆಶಯವನ್ನು ಅಧ್ಯಯನದಲ್ಲಿ ಪ್ರತಿಪಾದಿಸುತ್ತಾರೆ. ಮಾನವೀಯ ಮೌಲ್ಯಗಳನ್ನು ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿ ವಿವರಿಸುವ ಕ್ರಮವು ಮುಖ್ಯವೆನಿಸುತ್ತದೆ. ಯಾರೂ ಗಮನಿಸದ ಹಾದಿ ಯೊಂದನ್ನು ಅಧ್ಯಯನದಿಂದ ಅನ್ವೇಷಿಸಿ ಅವುಗಳನ್ನು ಒಳಗೊಂಡ ಕ್ರಮ ಗಳು, ಆಚರಣೆಗಳು ಮನುಷ್ಯತ್ವವನ್ನು ಒಡೆಯುವಂಥದ್ದಲ್ಲ, ಕಟ್ಟಿ ಜೋಡಿ ಸುವಂಥದ್ದು' ಎಂಬುದನ್ನು ಪ್ರತಿಪಾದಿಸಿವೆ. ಸಮುದಾಯಗಳ ಮಧ್ಯದ ಸೌಹಾರ್ದತೆಯ ಆಶಯವನ್ನು ಪ್ರತಿಪಾದಿಸುವ ಮೂಲಕ ಇಂದಿನ ಕೋಮುವಾದಕ್ಕೆ ಈ ಕೃತಿ ಉತ್ತರವನ್ನು ಒದಗಿಸಿದೆ. - ಡಾ. ಜ್ಯೋತಿ ಚೇಳ್ಳೆರು
Binding
Soft Bound
Author
Naveen Sooringe
ISBN-13
9789384501754
Publisher
Aharnishi Prakaashana
Publication Year
2025
Number of Pages
173
Height
2 CMS
Length
22 CMS
Width
14 CMS
Weight
200 GMS
Language
Kannada