Select Size
Quantity
Product Description
ಸಂದರ್ಶನಗಳು ಪತ್ರಿಕೆಯಲ್ಲೇ ಇರಲಿ, ಪುಸ್ತಕ ರೂಪದಲ್ಲೇ ಇರಲಿ, ಸಾಧಕರು ತೆರೆದ ಮನಸ್ಸಿನಿಂದ ತಮ್ಮ ಭಾವನೆ ಚಿಂತನೆ ಹಂಚಿಕೊಳ್ಳುವ, ನಾಟಕೀಯ ವಿನ್ಯಾಸದಲ್ಲಿರುವ ಕಾರಣದಿಂದ ಓದುಗರಿಗೆ ಇಷ್ಟವಾಗುತ್ತವೆ.
ಪ್ರಸ್ತುತ ಸಂದರ್ಶನ ಲೇಖನಗಳ ಸಂಕಲನವು ನಾಲ್ಕು ಕಾರಣಗಳಿಂದ ವಿಶಿಷ್ಟವಾಗಿದೆ.
ಮೊದಲನೆಯದಾಗಿ, ಇಲ್ಲಿನ ಸಂದರ್ಶನಗಳಿಗಿರುವ ಸೈದ್ಧಾಂತಿಕ ಚೌಕಟ್ಟಿನ ಕಾರಣದಿಂದ. ಇದೊಂದು ಸ್ತ್ರೀವಾದಿ ಮಾರ್ಕ್ಸಿಸ್ಟ್ ಚೌಕಟ್ಟು. ಹೆಚ್ಚಿನ ಸಂದರ್ಶನ ನೀಡುಗರು ಎಡಪಂಥೀಯರೂ ಮಹಿಳೆಯರೂ ಆಗಿರುವುದರಿಂದ ಇದು ಸಾಧ್ಯವಾಗಿದೆ. ಬಹುತೇಕ ಪ್ರಶ್ನೆ ಮತ್ತು ಉತ್ತರಗಳು ಈ ಚೌಕಟ್ಟಿನೊಳಗಿಂದಲೇ ಹೊಮ್ಮಿಬಂದಿವೆ. ಹೀಗಾಗಿ ಸಂಕಲನವು ತಾತ್ವಿಕ ಜಿಜ್ಞಾಸೆಯ ಸಂಪುಟವಾಗಿದೆ. ಈ ಜಿಜ್ಞಾಸೆಗೆ ಸಾಧಕರ ವೈಯಕ್ತಿಕ ಅನುಭವದ ಆಪ್ತತೆಯ ಅಂಚಿದೆ.
ಎರಡನೆಯದಾಗಿ, ಇಲ್ಲಿನ ಸಂದರ್ಶನಗಳು ಕಟ್ಟಿಕೊಡುತ್ತಿರುವ ಚರಿತ್ರೆಯ ಕಾರಣದಿಂದ. ಭಾರತದ ಅರ್ಧಶತಮಾನದ ಚಳುವಳಿಗಳ ಚರಿತ್ರೆಯೇ ಇಲ್ಲಿ ಮೈದೆರೆಯುತ್ತದೆ. ಕಳೆದೆರಡು ದಶಕಗಳಲ್ಲಿ ನಡೆದಿರುವ ವಿದ್ಯಮಾನಗಳ ಕನ್ನಡಿನೋಟವೂ ಸಿಗುತ್ತದೆ. ಹೀಗಾಗಿ ಇದೊಂದು ವಿಭಿನ್ನ ಪ್ರದೇಶ ಮತ್ತು ಕಾಲಘಟ್ಟಗಳಲ್ಲಿ ನಡೆದ ಜನಪರ ಚಳುವಳಿಗಳ ಸೋಲು-ಗೆಲುವಿನ ಚರಿತ್ರೆ. ಸಂದರ್ಶನ ಮತ್ತು ವ್ಯಕ್ತಿಚಿತ್ರಗಳ ಮೂಲಕ ಕಟ್ಟಿಕೊಳ್ಳುವ ಇಲ್ಲಿನ ಚರಿತ್ರೆ ಮಾನವೀಯ ಘಟನೆಗಳಿಂದ ಕೂಡಿದೆ.
ಮೂರನೆಯದಾಗಿ, ಚರಿತ್ರೆಯಲ್ಲಿ ನಡೆದುಹೋದ ವಿದ್ಯಮಾನಗಳನ್ನು ವರ್ತಮಾನದ ಕಠೋರ ವಾಸ್ತವದಲ್ಲಿ ಮತ್ತು ನಿಕಷದಲ್ಲಿ ಇಟ್ಟು ಮಾಡಲಾಗಿರುವ ವಿಮರ್ಶೆಯಿಂದ. ಇದೊಂದು ಬಗೆಯಲ್ಲಿ ಸಾಧಕರ ಹಾಗೂ ಅವರು ನಂಬಿದ ಸಿದ್ಧಾಂತ ಮತ್ತು ಮಾರ್ಗಗಳ ಸ್ವವಿಮರ್ಶೆಯೂ ಆಗಿದೆ.
ನಾಲ್ಕನೆಯದಾಗಿ, ಇಲ್ಲಿರುವ ಮುಂಗಾಣ್ಕೆಯ ಆಯಾಮದಿಂದ. ಸಂದರ್ಶನ ನೀಡಿರುವ ಬಹುತೇಕರು ಆಕ್ಟಿವಿಸ್ಟರು. ಸಮಾಜಕ್ಕಾಗಿ ಬಾಳನ್ನೇ ತೇದವರು. ಹೀಗಾಗಿ ಇಲ್ಲಿನ ಸೈದ್ಧಾಂತಿಕ ಚರ್ಚೆ ಕೇವಲ ಶೈಕ್ಷಣಿಕ ನೆಲೆಯಲ್ಲಿಲ್ಲ. ಕ್ರಿಯಾಚರಣೆಯ ನೆಲೆಯಲ್ಲೂ ಇದೆ. ಸಿದ್ಧಾಂತ, ವಾಸ್ತವ ಹಾಗೂ ಕ್ರಿಯೆಯ ನಡುವಣ ಬೆಸುಗೆ ಮತ್ತು ಬಿರುಕುಗಳನ್ನು ಸಾಧಕರು ತಮ್ಮ ಅನುಭವ ಮತ್ತು ಚಿಂತನೆಯ ಮೂಲಕ ಕಾಣಿಸಿರುವರು.
ಇಲ್ಲಿನ ಸಂದರ್ಶನಗಳು ಸಾಧಕರ ವ್ಯಕ್ತಿಚಿತ್ರಗಳೂ ಆಗಿವೆ. ಗೋವಿಂದ ಪಾನ್ಸರೆ, ಅನಸೂಯಮ್ಮ, ರಂಗನಾಯಕಮ್ಮ, ಪ್ರತಿಭಾ ರೇ, ಕೋಟೇಶ್ವರಮ್ಮ, ವಿಜಯಮ್ಮ ಅವರ ಅನುಭವ ಮತ್ತು ವ್ಯಕ್ತಿಚಿತ್ರಗಳು ವಿಶಿಷ್ಟವಾಗಿವೆ
Weight
250 GMS
Length
22 CMS
Width
14 CMS
Height
2 CMS
Author
Dr N Gayathri
Publisher
Nava Karnataka Publications Pvt Ltd
Publication Year
2020
Number of Pages
200
Binding
Soft Bound
Language
Kannada