Quantity
Product Description
‘ಅವಳು ಬದುಕ ಕಲಿಸಿದವಳು’ ಯುವ ಜನತೆಯಲ್ಲಿ ಸಂಚಲನ ಮೂಡಿಸಿದ ಸತ್ಯ ಘಟನೆಯಾಧಾರಿತ ಒಂದು ಅದ್ಭುತ ಪ್ರೇಮ ಕಥೆ. ಇದು ಲೇಖಕ ಅರ್ಜುನ್ ದೇವಾಲದಕೆರೆ ಅವರ ಕಾದಂಬರಿ. ಈ ಕೃತಿಗೆ ರಾಜೇಶ್ವರಿ ತೇಜಸ್ವಿ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಅದೆಷ್ಟು ಚೆನ್ನಾಗಿ ಬರೆಯುವಿರಿ ಅರ್ಜುನ್ ದೇವಾಲದಕೆರೆ. ಅವಳು ಕಾದಂಬರಿಯನ್ನು ನಾನು ಓದಿದ್ದು ಅರ್ಜುನ್ ರ ಇನ್ನೊಂದು ಕಾದಂಬರಿ ಆಟಗಾರ ನನ್ನು ನನ್ನ ಕೈಯಾರೆ ಬಿಡುಗಡೆಗೊಳಿಸಿದ ನಂತರ. ಒಂದೇ ಗುಕ್ಕಿನಲ್ಲಿ ಓದಿಸಿಕೊಂದಿತ್ತು ಅವಳು ಕಾದಂಬರಿ. ಕಾದಂಬರಿಯ ಪ್ರಾರಂಭದಲ್ಲಿ ಅವಳನ್ನೋದುವ ಮುನ್ನು ಎಂಬ ಪೀಠಿಕೆಯನ್ನು ಓದುತ್ತಿರುವಾಗ ಅರೆಕ್ಷಣ ನನ್ನ ಮಾವನವರಾದ ಕುವೆಂಪುರವರ ನೆನಪಾಗಿದ್ದು ಸುಳ್ಳಲ್ಲ ಎಂದು ಬರೆದಿದ್ದಾರೆ ರಾಜೇಶ್ವರಿ ತೇಜಸ್ವಿ. ಜೊತೆಗೆ ಅವಳು ಎಲ್ಲೂ ಕೂಡಾ ಕಾಲ್ಪನಿಕವೆಸುವುದಿಲ್ಲ. ನಮ್ಮ ಎದುರಲ್ಲೇ ನಡೆಯುತ್ತಿರುವ ನಮ್ಮ ಪಕ್ಕದ ಮನೆಯ ಹುಡುಗನ ಬದುಕಿನ ಏಳು-ಬೀಳುಗಳನ್ನು ಕಣ್ಣಾರೆ ಕಾಣುತ್ತಿರುವ ಭಾಸವಾಗುತ್ತದೆ. ಅವಳೊಳಗಿರುವ ಪ್ರೇಮ, ಅದನ್ನು ಕಾವ್ಯಾತ್ಮಕವಾಗಿ ಕೆಲವೆಡೆ ಪ್ರಸ್ತುತ ಪಡಿಸಿರುವ ರೀತಿಯಂತೂ ಅತ್ಯದ್ಭುತ.
ಕಾದಂಬರಿಯನ್ನು ಸಂಪೂರ್ಣವಾಗಿ ಯುವಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆಯುತ್ತಾ ಹೋಗಿರುವುದು ಅರ್ಜುನ್ ರವರ ಬಹುದೊಡ್ಡ ಶಕ್ತಿ. ನನ್ನ ಅಳಿಯ ನಾನೀ ಕಾದಂಬರಿಯನ್ನು ಮನೆಗೆ ತಂದ ಮರುದಿನ ಬೆಂಗಳೂರಿನಿಂದ ಬಂದಿಳಿದಿದ್ದರು. ಬರುವಾಗ ಸ್ಟೀಫನ್ ಹಾಕಿನ್ಸ್ ರ ಪುಸ್ತಕವನ್ನು ಓದಲೆಂದು ಜೊತೆ ತಂದಿದ್ದರು. ಅದನ್ನು ಬದಿಗೆ ಸರಿಸಿ ಅರ್ಜುನ್ ರವರ ಅವಳು ಮತ್ತು ಆಟಗಾರ ನನ್ನು ಕೈಗಿಟ್ಟಿದ್ದೆ. ಮುಗಿಸಿ ಎದ್ದವರು ಬಹಳವೇ ಸಂಭ್ರಮಪಟ್ಟರು. ಅರ್ಜುನ್ ದೇವಾಲದಕೆರೆ ಮಲೆನಾಡ ಭಾಗದಲ್ಲಿ ನಾ ಕಂಡ ಯುವಸಾಹಿತಿಗಳಲ್ಲಿ ಮುಂಚೂಣಿಯಲ್ಲಿರುವವರು ಎಂದು ಮೆಚ್ಚಿ ಬರೆದಿದ್ದಾರೆ.
Author
Arjun Devaladakere
Binding
Soft Bound
Number of Pages
260
Publication Year
2018
Publisher
Devaaladakere prakashana
Height
10 CMS
Length
10 CMS
Weight
200 GMS
Width
1 CMS
Language
Kannada