Product Description
ಲೇಖಕರ ಬಗ್ಗೆ
ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ಪ್ರೇಮದ ಒಂದೊಂದು ಕಥೆ ಇರುತ್ತದೆ. ಆ ಕಥೆಯ ಆಂತರ್ಯದಲ್ಲಿ ಹಲವಾರು ನಾಟಕೀಯ ಘಟನೆಗಳು, ಲೋಕಸತ್ಯದ ಜಾನಪದ ಧ್ವನಿಗಳು, ತಲ್ಲಣಗೊಳಿಸುವ ಶೋಕಗೀತೆಗಳು ತುಂಬಿಕೊಂಡಿರುತ್ತವೆ. ಪ್ರೇಮ ಕಾಳರಾತ್ರಿಯ ಒಡಲಿನಂತೆ ಪ್ರಾಣಾಂತಿಕವಾಗಿ ಆಕರ್ಷಿಸುತ್ತದೆ. ಪ್ರೇಮದ ಅರ್ಥ ದೇವರಷ್ಟೇ ನಿಗೂಢವಾದದ್ದು. ಅದೊಂದು ನಿರಂತರ ಬಾಯಾರಿಕೆಯ ಲೋಕಕ್ರಿಯೆ.
ಈ ಕಾದಂಬರಿ ನಮ್ಮ ಸೀಮೆಯ ಬದುಕಿನ ಕಥೆಯಾಗಿದೆ. ಇಲ್ಲಿಯ ನಂಬಿಕೆಯ ವ್ಯವಸ್ಥೆ ಹೇಗಿದೆ ಎಂದರೆ ಅದಕ್ಕೆ ಮೃತ್ಯು ಕೂಡ ಹೆದರಿ ಹಿಂದೆ ಸರಿಯುತ್ತದೆ. ಇದು ಸಾವು ಗೆಲ್ಲುವ ಅಸ್ತ್ರದಂತೆಯೂ ಕಂಡಿದೆ. ಬುದ್ಧಿ ಮತ್ತು ಭಾವ ಒಂದು ಬಿಂದುವಿನಲ್ಲಿ ಕೂಡಿದಾಗ, ಆ ಬಿಂದು ದೂರವಿದ್ದೂ, ಅದು ನಮ್ಮೊಡನೆ ಒಂದಾದಾಗ, ಈ ಕೂಡೂವಿಕೆಯಲ್ಲಿಯೇ ಒಂದು ವಿಸ್ತಾರವಾದ ಗೆಲವು ಸಿಕ್ಕಾಗ, ಆ ಗೆಲವನ್ನು ಪ್ರತಿಗಳಿಗೆಯೂ ಅನುಭವಿಸುತ್ತಿದ್ದಾಗ; ಸಾವು, ವೈಯಕ್ತಿಕ ಸೋಲುಗಳು, ಬದುಕಿನ ಸಂಕಷ್ಟಗಳು ತೆಳುವಾಗುತ್ತ, ಆ ಬಿಂದುವಿನ ಸೆಳೆತ ಮಿಗಿಲಾಗಿ, ಬದುಕಿಗೆ ಅರ್ಥಪ್ರಾಪ್ತವಾಗುವುದಿದ್ದರೆ, ಆ ಬಿಂದುವನ್ನು ಚಂದ್ರನೆಂದು ಯಾಕೆ ಕರೆಯಬಾರದು? ಆ ಚಂದ್ರನೇ ಈ ಕಾದಂಬರಿಯ ಜೀವ ಹಾಗು ಬೆಳಕು. ಮನುಷ್ಯ ಹುಡುಕಾಟಗಳ ಅಂತಿಕ ಸತ್ಯ. ಇದು ಸೋತು ಗೆದ್ದ ಬದುಕಿನ ಕಥಾನಕ!