Product Description
Master Jayanth, Kala, BAS Prasanna, Bhargavi Narayan, Master Binoo
ಕಥಾ ಸಾರಾಂಶ
ಸಾಂಬ ತಂದೆಯ ತಾಯಿಯನ್ನು ಕಳೆದುಕೊಂಡು ತಾತ, ಅಜ್ಜಿಯ ಮನೆಯಲ್ಲಿ ಬೆಳೆಯುತ್ತಾ ಇರುವ ಬಾಲಕ. ಪ್ರತಿದಿನದ ಊಟಕ್ಕೂ ಕಷ್ಟವಿರುವ ತಾತ, ಅಜ್ಜಿಯು ಒಂದು ದಿನ ಮೊಮ್ಮಗನಿಗೆ ಊಟವನ್ನು ಹಾಕಲಾಗದೆ, ಶಾಲೆಯ ಬಳಿಯಲ್ಲಿಯೇ ಏನಾದರೂ ತಿಂದುಕೋ ಎಂದು ಐವತ್ತು ಪೈಸೆ ಕೊಡುತ್ತಾರೆ. ಕೈಯಲ್ಲಿ ದುಡ್ಡಿದೆ ಎಂದು ಕನಸುವ ಬಾಲಕನ ಎದುರಿಗೆ ಲಾಟರಿ ಟಿಕೇಟ್ ಮಾರುವವರು ಕಾಣಿಸಿ, ಆತ ಊಟ ಮರೆತು ಲಾಟರಿ ಟಿಕೇಟು ಕೊಳ್ಳುತ್ತಾನೆ. ಅಲ್ಲಿಂದಾಚೆಗೆ ತನಗೆ ಬರಬಹುದಾದ ಬಹುಮಾನವನ್ನು ಕುರಿತು ಕನಸುವ ಸಾಂಬನಿಗೆ ಮೊದಲ ಬಹುಮಾನವೇ ಬಂದಿರುತ್ತದೆ. ಸಂಭ್ರಮದಿಂದ ಬಹುಮಾನ ಪಡೆಯಲು ಗೆಳೆಯರ ಜೊತೆಗೆ ಹೋದವನು ತರುವುದು ಬಿಳಿಯ ಮರಿ ಆನೆ. ನಿತ್ಯದ ಜೀವನಕ್ಕೇ ಕಷ್ಟವಿರುವ ಮನೆಯವರು ಆನೆಯನ್ನು ಹಿಂದಿರುಗಿಸುವ ಪ್ರಯತ್ನ ಮಾಡುವಾಗ ಸಾಂಬ ತನ್ನ ಗೆಳೆಯರ ಜೊತೆಗೆ ತನ್ನ ಬಹುಮಾನವಾದ ಮರಿ ಆನೆಯನ್ನು ಉಳಿಸಿಕೊಳ್ಳುವ ಸಾಹಸ ಮಾಡುತ್ತಾನೆ. ಈ ಹಾದಿಯಲ್ಲಿ ಸಾಂಬ ಮತ್ತು ಗೆಳೆಯರು ಮಾಡುವ ಪ್ರಯತ್ನಗಳಿಗೆ ಗೆಲುವು ಸಿಗುತ್ತದೆಯೇ ಇಲ್ಲವೇ ಎಂಬುದು “ಜಂಬೂಸವಾರಿ” ಮಕ್ಕಳ ಸಿನಿಮಾದ ಕತೆಯ ತಿರುಳು.
ಎ.ಎಸ್.ಮೂರ್ತಿಯವರು ಬರೆದ ಈ ಮಕ್ಕಳ ನಾಟಕವನ್ನು ಸಿನಿಮಾಕ್ಕೆ ಅಳವಡಿಸಿ ಬರೆದವರು ಬಿ.ಸುರೇಶ. ನಿರ್ದೇಶನ ಕೆ.ಎಸ್.ಎಲ್.ಸ್ವಾಮಿ (ರವೀ) ಅವರದ್ದು.