Select Size
Quantity
Product Description
ಸಮಾನತೆಯ ಜಾಗದಲ್ಲಿ ಅಸಮಾನತೆ ಸ್ಥಾಪಿತವಾಗುವುದು ಎಲ್ಲ ಬುಡಕಟ್ಟುಗಳ ವಿಘಟನೆಯ ಸಂದರ್ಭದಲ್ಲೂ ಉಂಟು. ಆರ್ಥಿಕ ಅಸಮಾನತೆಯಿಂದ ರೂಢಿಗೆ ಬರುವ ಸಾಮಾಜಿಕ ಅಸಮಾನತೆಯ ಘೋರ ಪರಿಣಾಮ ಎಲ್ಲ ದೇಶಗಳಲ್ಲೂ ಕಂಡುಬಂದಿದೆ. ಉದಾಹರಣೆಗೆ, ಪ್ರಾಚೀನ ಗ್ರೀಸ್ ಮತ್ತು ರೋಮ್ ಇತಿಹಾಸದಲ್ಲಿ ಗುಲಾಮಿ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಗುಲಾಮರನ್ನು ಆ ಸಮಾಜಗಳು ಅಸ್ಪೃಶ್ಯರೆಂದು ಪರಿಗಣಿಸಲಿಲ್ಲ. ನಮ್ಮ ದೇಶದ ಕ್ರೌರ್ಯವು ಸಮಾಜದ ಒಂದು ವಿಭಾಗವನ್ನು ಕೇವಲ ಭೀಕರ ಶೋಷಣೆಗೆ ಗುರಿಮಾಡಲಿಲ್ಲ. ಆ ವಿಭಾಗವನ್ನು ಅಮಾನುಷವಾಗಿ ಹಿಂಸಿಸಿತು ಮತ್ತು ದೈಹಿಕವಾಗಿ ಸ್ಪೃಶ್ಯರನ್ನಾಗಿಸಿತು. ಇಂತಹ ಸಾಮಾಜಿಕ ಪಿಡುಗೊಂದು ಯಾವ ದೇಶದಲ್ಲೂ ಮೂರು ಸಾವಿರ ವರ್ಷಗಳ ಕಾಲ ನಿರಂತರವಾಗಿ ಬಾಧೆಯುಂಟುಮಾಡಿರುವ ದೃಷ್ಟಾಂತವಿಲ್ಲ. ಅದು ನಮ್ಮ ದೇಶದ ಅಸಹ್ಯ ಅನನ್ಯತೆಯಾಗಿ ಉಳಿದಿದೆ. ಮಾನಸಿಕವಾಗಿ ಇಡೀ ಸಮಾಜವು ಅಂತಹ ದೌರ್ಜನ್ಯವನ್ನು ಸಾರಾಸಗಟಾಗಿ ಸ್ವೀಕರಿಸಿದ್ದಿರಲಾರದು.
-ಡಾ||ಜಿ.ರಾಮಕೃಷ್ಣ
Weight
250 GMS
Length
33 CMS
Width
14 CMS
Height
3 CMS
Author
Dr M Venkataswamy
Publisher
Nava Karnataka Publications Pvt Ltd
Publication Year
2018
Number of Pages
220
Binding
Soft Bound
Language
Kannada