Quantity
Product Description
ಈ ಸಂಗ್ರಹದಲ್ಲಿರುವ ಲೇಖನಗಳು ಕನ್ನಡ ನಾಡಿನ ಸುಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ಸುಧಾ, ಮಯೂರ, ತುಷಾರ ಹಾಗೂ ಸಂಜೆವಾಣಿಗಾಗಿ ನನ್ನ ಪತಿ ಪ್ರೊ. ಎಲ್.ಎಸ್. ಶೇಷಗಿರಿರಾಯರು ಬರೆದದ್ದು.ಇಲ್ಲಿನ ಹಲವು ಲೇಖನಗಳು ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾದವು. 70ರ ದಶಕದಲ್ಲಿ ಅವರು ಭಾಗವಹಿಸಿದ ವಿಚಾರ ಸಂಕಿರಣಗಳಲ್ಲಿ ನೀಡಿದ ಕೆಲವು ಉಪನ್ಯಾಸಗಳೂ ಇಲ್ಲಿವೆ. 1946ರಷ್ಟು ಹಿಂದೆ ಕತೆಗಾರ ಮಾಸ ಪತ್ರಿಕೆಯ ಒಂದು ವಾರ್ಷಿಕ ಸಂಚಿಕೆಗಾಗಿ ಬರೆದ 'ಸಣ್ಣಕತೆಯಲ್ಲಿ ವಾಸ್ತವಿಕತೆ' ಇಂದಿಗೂ ಪ್ರಸ್ತುತವೆಂದು ಇಲ್ಲಿ ಸೇರಿಸಿದೆ.
ಕಾಲದಿಂದ ಕಾಲಕ್ಕೆ ಆಧುನಿಕ ಕನ್ನಡ ಸಾಹಿತ್ಯ ನಡೆದುಬಂದ ದಾರಿಯನ್ನು ಸ್ಥೂಲವಾಗಿ ಗುರುತಿಸುವುದು ಈ ಪುಸ್ತಕದ ಉದ್ದೇಶ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಾಗೂ ನವೋದಯ ಪೂರ್ವ, ನವೋದಯ,ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಘಟ್ಟಗಳಲ್ಲಿ ಬೆಳೆದು ಬಂದ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಒಂದು ಉತ್ತಮ ಪ್ರವೇಶವನ್ನು ಇಲ್ಲಿನ ಲೇಖನಗಳು ದೊರಕಿಸುತ್ತವೆ.
Author
S L Sheshagiri Rao
Binding
Soft Bound
Number of Pages
300
Publisher
Ankitha Pusthaka
ISBN-13
9789392230110
Publication Year
2022
Weight
300
Length
20
Width
20
Language
Kannada