Product Description
ಡಿವಿಜಿಯವರು ‘ಸಾಹಿತಿ’ಯಾಗಿ ಮಾಡಿರುವ ಕೆಲಸಕ್ಕಿಂತ ಸಾರ್ವಜನಿಕ ಕಾರ್ಯಕರ್ತನಾಗಿ ಮತ್ತು ‘ರಾಷ್ಟ್ರಕ’ನಾಗಿ ಮಾಡಿರುವ ಕೆಲಸವೇ ಹೆಚ್ಚಾದದ್ದು. ಸಾಹಿತಿಯಾಗಿ ಮಾಡಿಕ ಕೆಲಸ ಕೈಗೆ ಸಿಗುತ್ತದೆ, ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಾಣಬರುತ್ತದೆ. ಆದರೆ ಸಾರ್ವಜನಿಕ ಕಾರ್ಯಕರ್ತನಾಗಿ ಅವರು ಮಾಡಿರುವ ಕೆಲಸದ ಒಂದು ಸ್ವಲ್ಪ ಭಾಗ ಮಾತ್ರ ನಮಗೆ ಸಿಗುತ್ತದೆ. ಬಹುಭಾಗ ನಮಗೆ ತಿಳಿದುಬರುವುದೇ ಇಲ್ಲ ಎನ್ನಬಹುದು. ಆ ತಿಳಿದುಬರುವ ಭಾಗವನ್ನಾದರೂ ತಿಳಿಸುವುದೇ ಇಲ್ಲಿಯ ಉದ್ದೇಶ. ಡಿವಿಜಿಯವರು ಪತ್ರಿಕೆಗಳನ್ನು ನಡೆಸಿದ ರೀತಿ, ಸಾಹಿತ್ಯ ಪರಿಷತ್ತನ್ನು ಬೆಳೆಸಿದ ವೈಖರಿ, ಶಾಸನ ಸಭೆಯಲ್ಲಿ ಮಾಡಿದ ಕೆಲಸ, ಗೋಖಲೆ ಸಂಸ್ಥೆಯ ಚರಿತ್ರೆ, ಅವರ ವಿದ್ವತ್ತು ಮತ್ತು ವಾಙ್ಮಯ ರಾಶಿ, ಅವರ ಮಿತ್ರಮಂಡಳಿ - ಇವು ಪ್ರತಿಯೊಂದೂ ಒಂದೊಂದು ಪ್ರತ್ಯೇಕ ಗ್ರಂಥಕ್ಕೆ ವಿಷಯವಾಗಬಲ್ಲದು. ಅವೆಲ್ಲವನ್ನು ಸೇರಿಸಿ ಒಂದೇ ಗ್ರಂಥದಲ್ಲಿ ಹೇಳಿರುವುದೇ ಒಂದು ಸಾಹಸದ ಕೆಲಸ.