Quantity
Product Description
ಕಡು ವಿಷಾದದ ನಾಕು ಸಾಲು ಬರೆಯುತ್ತೇನೆ ಎಂದು ಕುಳಿತಾಗೆಲ್ಲ ನನ್ನೊಳಗೆ ಅಷ್ಟೇನೂ ದುಃಖವಿಲ್ಲ ಅನ್ನಿಸಿ ಬೇಜಾರಾಗುತ್ತದೆ. ಅಮ್ಮ ನನಗಾಗಿ ಕಷ್ಟಪಡುವುದನ್ನು ನೋಡಿದಾಗ ಸಂಕಟವಾಗುತ್ತಿತ್ತು, ಈಗ ಅಮ್ಮನಿಲ್ಲ. ಅಪ್ಪ ನನ್ನ ಕಾಲೇಜು ಫೀಸಿಗೆ, ಸೈಕಲ್ಲಿಗೆ, ನಾನು ಕದ್ದು ಸೇದುತ್ತಿದ್ದ ಸಿಗರೇಟಿಗೆ ದುಡ್ಡು ಹೊಂಚುವುದಕ್ಕೆ ಬೆವರು ಸುರಿಸಿ ದುಡಿಯುವುದನ್ನು ನೆನೆದು ನೋವಾಗುತ್ತಿತ್ತು. ಈಗ ಅಪ್ಪನಿಲ್ಲ. ನಮ್ಮೂರಿನ ದುಡ್ಡಿದ್ದ ಮಂದಿ ನನ್ನೆದುರು ಧೂಳೆಬ್ಬಿಸುತ್ತಾ ಕಾರಲ್ಲಿ ಓಡಾಡುವಾಗ ಕಣ್ಣೀರು ಉಕ್ಕುತ್ತಿತ್ತು. ಈಗ ನನ್ನ ಬಳಿಯೂ ಕಾರಿದೆ. ಗಾಂಧಿಜಿಯನ್ನು ಗುಂಡಿಕ್ಕಿ ಕೊಂದ ಅಧ್ಯಾಯ ಓದುವಾಗ ಮನಸ್ಸು ಮರುಗುತ್ತಿತ್ತು. ಈಗ ಗಾಂಧಿ ದಿನವೂ ಕೊಲೆಯಾಗುತ್ತಿರುತ್ತಾರೆ. ಇಂಗ್ಲಿಷ್ ಸಿನಿಮಾದ ಸಂಭಾಷಣೆ ಅರ್ಥವಾಗದೇ ಇದ್ದಾಗ, ಪಾಬ್ಲೋ ನೆರುಡನ ಪದ್ಯ ಓದಿದಾಗ, ಹದಿನೈದು ಪೈಸೆ ಕಡಿಮೆ ಕೊಟ್ಟದ್ದಕ್ಕೆ ಕಂಡಕ್ಟರ್ ಅಪರಾತ್ರಿ ಬಸ್ಸಿನಿಂದ ಇಳಿಸಿದ್ದು ನೆನಪಾದಾಗ ಕವಿಯುತ್ತಿದ್ದ ವಿಷಾದ ಈಗ ಮಾಯವಾಗಿದೆ. ದುಃಖಪಡಲು ಮೂರು ಒಳ್ಳೆಯ ಕಾರಣಗಳನ್ನು ಕೊಡು ಅಂತ ದೇವರನ್ನು ಕೇಳೋಣವೆಂದರೆ ಅವನ ಮೇಲೆ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ನನ್ನ ಒಳಗುದಿಯನ್ನೆಲ್ಲ ಯಾರು ಯಾರೋ ಹೊತ್ತು ನಡೆದು ನನ್ನನ್ನು ದುಃಖವಿಲ್ಲದ ಅನಾಥನನ್ನಾಗಿ ಮಾಡಿದ್ದಾರೆ. ಆದರೂ ದುಃಖವಾಗುತ್ತಿಲ್ಲ. ದಯವಿಟ್ಟು ನನಗೊಂದು ಚಿಟಿಕೆ ದುಃಖ ಕೊಡಿ. Make me unhappy..
ISBN-13
9788168955714
Number of Pages
240
Publisher
Sawanna Enterprises
Publication Year
2026
Author
Jogi
Binding
Soft Bound
Height
2 CMS
Length
22 CMS
Weight
200 GMS
Width
14 CMS
Language
Kannada