Quantity
Product Description
ನಮ್ಮ ದೇಹದಂತೆಯೇ ನಮ್ಮ ಮನಸ್ಸು. ಬದುಕಿನಲ್ಲಿ ಅದೆಷ್ಟೋ ತಾಪಗಳು, ಒತ್ತಡಗಳು ನಮ್ಮನ್ನು ಬಳಲಿಸುತ್ತವೆ. ಬಳಲಿಕೆ ನಮ್ಮ ಜೀವನೋತ್ಸಾಹವನ್ನು ಕಸಿಯುತ್ತದೆ. ಆಗ ಮನಸ್ಸನ್ನು ಆಹ್ಲಾದಗೊಳಿಸಿ ಮತ್ತೆ ಉತ್ಸಾಹವನ್ನು ತುಂಬಲೇಬೇಕು. ಇಂತಹ ತಾಪ ಮತ್ತು ಬಳಲಿಕೆಗಳನ್ನು ದೂರಮಾಡುವ ಆಹ್ಲಾದಕಾರಕ ಸಿಂಚನಗಳಲ್ಲಿ ಪುಸ್ತಕದ ಓದು ಕೂಡ ಒಂದು. ಅದರಲ್ಲೂ, ಹೆಚ್ಚು ಸಮಯ ಹಿಡಿಸದ ಕಿರುಗಥೆಗಳ ಓದು ಇಂದಿನ ಯಾಂತ್ರಿಕ ಬದುಕಿಗೆ ಸೂಕ್ತವಾದುದು. ಹೀಗೆ ಚಿಂತಿಸಿ, ಪ್ರಸ್ತುತ ನನ್ನ ಕಿರುಗಥಾ ಸಂಕಲನಕ್ಕೆ 'ಕಥಾ ಸಿಂಚನ' ಎಂದು ಹೆಸರಿಟ್ಟಿದ್ದೇನೆ. ಬದುಕಿನಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೇ ತೊಂದರೆಗಳು ಹೆಚ್ಚು. ಅದಕ್ಕೆ ಕಾರಣ ಮೂಢ ನಂಬಿಕೆ, ಸಮಾಜದ ಕಟ್ಟುಪಾಡುಗಳು. ಬಂಜೆತನ, ಮೂಲಾನಕ್ಷತ್ರ, ಬಾಡಿಗೆ ತಾಯ್ತನ, ಕನ್ಯಾದಾನ, ವಿವಾಹ ವಿಚ್ಛೇದನ ಇಂಥ ಅನೇಕ ಗಂಭೀರ ವಿಷಯಗಳನ್ನು ಲಘುಬರಹದ ಹಾಸ್ಯ ಕಥೆಗಳನ್ನಾಗಿಸಿದ್ದೇನೆ. ರೋಚಕ, ಗಂಭೀರ ಮತ್ತು ಮಾರ್ಮಿಕ ಕಥೆಗಳು ಕೂಡ ಇಲ್ಲಿ ಜಾಗ ಪಡೆದಿವೆ. ಸಂಸಾರ ತಾಪತ್ರಯಗಳು, ಮುಗ್ಧ ಮಕ್ಕಳಿಂದ ಹೆತ್ತವರಿಗಾಗುವ ಪೇಚಿನ ಪ್ರಸಂಗಗಳು, ಕುಡಿತ ಮತ್ತು ಕುಡುಕರ ರಗಳೆಗಳು, ರಾಜಕೀಯ ವಿಡಂಬನೆ, ಆನ್ಸೆನ್ ಸಾಹಿತಿಗಳ ಕಷ್ಟ ಸುಖಗಳು ಮುಂತಾದ ಕುತೂಹಲಕಾರಿ ಅನುಭವಗಳು ಈ ಹೊತ್ತಿಗೆಯಲ್ಲಿ ಕಥೆಗಳಾಗಿವೆ. ಕಥೆಗಳಲ್ಲಿರುವ ತಿರುವುಗಳು, ಪಂಚ್ ಲೈನುಗಳು, ನವೀನ ಪದಃಪುಂಜಗಳು, ಓದುಗರಿಗೆ ಒಂದು ವಿಶೇಷ ಅನುಭವವನ್ನು ನೀಡುತ್ತವೆ. ಅವು ಓದುಗರನ್ನು ರಂಜಿಸುತ್ತವೆ ಎಂಬ ವಿನಮ್ರ ನಂಬಿಕೆ ನನ್ನದು. ಅಷ್ಟೇ ಅಲ್ಲ. ಇಂತಹ ಕಥೆಗಳ ಮೂಲಕ, ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಪ್ರಯತ್ನವನ್ನೂ ಮಾಡಿದ್ದೇನೆ. ಸೂಕ್ಷ್ಮಮತಿಗಳಾದ ನನ್ನ ಪ್ರಿಯ ವಾಚಕರು ಇವನ್ನು ಗುರುತಿಸಿ ಮೆಚ್ಚುತ್ತಾರೆಂದು ನಾನು ವಿನಯಪೂರ್ವಕವಾಗಿ ನಂಬಿರುವೆ. ವೆಂಕಟೇಶ್ ಎಂ.ಟಿ.
Author
Venkatesh M T
Binding
Soft Bound
Number of Pages
228
Publication Year
2025
Publisher
Malenadu Prakashana
Height
2 CMS
Length
22 CMS
Weight
200 GMS
Width
14 CMS
Language
Kannada