Product Description
ಸ್ಫರ್ಧಾತ್ಮಕ ಪರೀಕ್ಷೆಗಳೆಂದರೆ ಪರೀಕ್ಷಾರ್ಥಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬ ಆಶಯವಿರುವುದು ಸಹಜ. ಆ ಆಶಯವನ್ನು ಸಾಕಾರಗೊಳಿಸುವುದಕ್ಕಾಗಿ ಧಾವಂತಪಡುವುದು, ಏನನ್ನು ಓದಬೇಕೆಂದು ಆತಂಕಗೊಳ್ಳುವುದು ಸ್ವಾಭಾವಿಕ. ಇದಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮಾರ್ಗದರ್ಶನವನ್ನು ಒದಗಿಸುವ 'ಭಾರತದ ರಾಜಕೀಯ ವ್ಯವಸ್ಥೆ ಮತ್ತು ಸಂವಿಧಾನ', 'ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ವಿಜ್ಞಾನ, 'ಇತಿಹಾಸ' ಮತ್ತು 'ಸಾಮಾನ್ಯ ಅಧ್ಯಯನ' ಇಂತಹ ಪುಸ್ತಕಗಳನ್ನು ನಮ್ಮ ಪ್ರಕಾಶನ ಸಂಸ್ಥೆಯು ಹೊರತಂದಿದೆ. ಈ ಪುಸ್ತಕಗಳ ವಿಶೇಷವೆಂದರೆ ಸರಳ ಶೈಲಿ, ಆಕರ್ಷಕ ನಿರೂಪಣೆ ಮತ್ತು ಖಚಿತ ಮಾಹಿತಿ. ಪರಿಣತರು ಸಿದ್ಧಗೊಳಿಸಿರುವ ಈ ಪುಸ್ತಕಗಳು ಪರೀಕ್ಷಾರ್ಥಿಗಳಿಗೆ ತೀರಾ ಉಪಯುಕ್ತ.