Select Size
Quantity
Product Description
ಸಮಕಾಲೀನ ಕಥಾ ಚಿತ್ರಣದ ಜೊತೆಗೆ ಕಲ್ಪನೆ ಹಾಗೂ ನವ್ಯಕಾಲದ ಆಶೋತ್ತರಗಳನ್ನು ಸೇರಿಸಿ ಕತೆಗಳನ್ನು ಬರೆಯುವುದು ಜಂಗಮಕೋಟೆ ಪುರುಷೋತ್ತಮರ ಕಥನ ಶೈಲಿಯಾಗಿದೆ. ನಿರೂಪಣೆಯಲ್ಲಿ ಹೊಸ ಹೊನಲಿನ ಗೋಜಿಗೆ ಹೋಗದೇ ಸಾಂಪ್ರದಾಯಿಕ ಅಡಿಪಾಯದಲ್ಲೇ ಕತೆ ಕಟ್ಟುವುದು ಅವರ ಬರವಣಿಗೆಯ ಮೂಲ ಉದ್ದೇಶವೆಂಬAತೆ ತೋರುತ್ತದೆ. `ಕೊಟ್ಟು ಹುಟ್ಟದವರ ಬದುಕು' ಕೃತಿ ನಗರ ಪರಿಸರದಲ್ಲಿನ ಮಧ್ಯಮ, ಉನ್ನತಸ್ತರದವರ ನಡುವಿನ ಒಮ್ಮತದ ಬದುಕು, ಅದರ ನಡುವಿನ ಒಳಾಂತರಗಳ ನಡುವಿನ ಸುಳಿವುಗಳನ್ನು ಬಿಚ್ಚಿಡುತ್ತದೆ. ಕತೆಗಾರರು ತಮ್ಮ ಪಾತ್ರಗಳ ಮೂಲಕ ಲೌಕಿಕ ಪಟ್ಟಾಂಗದ ನಡುವೆ ವಿಸ್ತೃತವಾದ ವಿಚಾರಗಳನ್ನು ಹೇಳಿಸುತ್ತಾ ಇಷ್ಟವಾಗುತ್ತಾರೆ. ಕತೆಗಳಲ್ಲಿನ ವಿಷಾದ ಮತ್ತು ವಿನೋದದ ಬದುಕಿನ ಸುದೀರ್ಫ ಒಳನೋಟವು ಓದುಗರ ಚಿಂತನೆಗೆ ಕಾರಣವಾಗುತ್ತದೆ.
Weight
300 GMS
Length
22 CMS
Height
1 CMS
Author
Jangamakote Purushottam
Publisher
Panchami Media Publications
Publication Year
2023
ISBN-10
9788196026844
Number of Pages
226
Binding
Soft Bound
Language
Kannada