Quantity
Product Description
ಮಾಸ್ತಿ ಜೀವನ ಚಿತ್ರಗಳು' ಕೃತಿಯು ಆಧುನಿಕ ಕನ್ನಡ ಸಾಹಿತ್ಯವನ್ನು ತಮ್ಮ ಅನನ್ಯ ಪ್ರತಿಭಾ ಸಂಪತ್ತಿನಿಂದ ಪೊರೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂಬ ಹಿರಿಯ ಜೀವದ ಬದುಕು-ಬರಹಗಳ ಹಲವು ಮಾದರಿಗಳನ್ನು ಸಮರ್ಥವಾಗಿ ಪರಿಚಯಿಸುವ ವಿಶಿಷ್ಟ ಹೊತ್ತಿಗೆಯಾಗಿದೆ. ಹೊಸ ತಲೆಮಾರಿನ ಓದುಗರಿಗೆ ಕಳೆದ ಶತಮಾನದುದ್ದಕ್ಕೂ ಕನ್ನಡ ಸಾರಸ್ವತಲೋಕವನ್ನು ತಮ್ಮ ಸ್ಟೋಪಜ್ಞ ಕಥನದ ಮೂಲಕ ಪ್ರಭಾವಿಸಿದ, ಬರಹದಂತೆಯೇ ದೊಡ್ಡ ಬದುಕನ್ನು ಬಾಳಿದ ಚೇತನವೊಂದರ ವ್ಯಕ್ತಿತ್ವವನ್ನು ಹಲವು ಆಯಾಮಗಳಲ್ಲಿ ಪರಿಚಯಿಸುವ ಈ ಕೃತಿಯನ್ನು ಅತ್ಯಂತ ಸ್ವಾರಸ್ಯಕರವಾಗಿ ಡಾ. ಎಚ್. ಎಸ್. ಸತ್ಯನಾರಾಯಣ ಅವರು ರಚಿಸಿದ್ದಾರೆ.
ಹಲವು ಆಯಾಮಗಳಿಂದ ಮಾಸ್ತಿಯವರ ಧೀಮಂತ ಬದುಕನ್ನು ಅರಿಯಲು ಈ ಕೃತಿ ಮಾರ್ಗದರ್ಶಕವಾಗಿದೆ. ಸರಳ-ಸುಲಲಿತ ಭಾಷೆಯ ಬಳಕೆಯಿಂದ ಸೊಗಯಿಸಿರುವ ಆಯಸ್ಕಾಂತೀಯ ಗುಣದ ಇಲ್ಲಿನ ಬರವಣಿಗೆ ಓದುಗರ ಮನವನ್ನು ನಿಸ್ಸಂದೇಹವಾಗಿ ಸೂರೆಗೊಳ್ಳಬಲ್ಲುದು. ಎಲ್ಲಿಂದ ಬೇಕಾದರೂ ಈ ಕೃತಿಯನ್ನು ಓದಿ ಸುಖಿಸಬಹುದು.
ನಮ್ಮ ಹಿರಿಯ ತಲೆಮಾರಿನ ಲೇಖಕರನ್ನು ಇಂದಿನವರಿಗೆ ಪರಿಚಯಿಸುವ ಮೂಲಕ ಅವರ ಸಾಹಿತ್ಯ ಪ್ರವೇಶಕ್ಕೆ ಓದುಗರನ್ನು ಸೆಳೆದೊಯ್ಯಬಲ್ಲ ಇಂತಹ ಕೃತಿಗಳು ಸದಭಿರುಚಿಯ ಓದಿಗೆ ಕೀಲಿಕೈಯಾಗಬಲ್ಲವು. ಈ ಆಶಯವೇ ಇಂತಹ ಪುಸ್ತಕಗಳ ಪ್ರಕಟಣೆಯ ಹಿಂದಿನ ಒತ್ತಾಸೆಯಾಗಿದೆ.
Author
Dr H S Sathyanarayana
Binding
Soft Bound
ISBN-13
9788198226372
Number of Pages
108
Publication Year
2025
Publisher
Amulya Pustaka
Height
1 CMS
Length
22 CMS
Weight
100 GMS
Width
14 CMS
Language
Kannada