Select Size
Quantity
Product Description
ತನ್ನ ಹಿಂದಿನ ಕಾಲದ ಗ್ರಾಮೀಣ ಬದುಕಿನ ನುಡಿ ಚಿತ್ರಗಳಂತಿರುವ ಕಥೆಗಳನ್ನೂ, ತನ್ನ ಕಾಲದ ತಲ್ಲಣಗಳಿಗೆ ಹಿಡಿದ ಕನ್ನಡಿಯಂತಿರುವ ಕಥೆಗಳನ್ನೂ ಒಂದೇ ಹದದಲ್ಲಿ ನಿಭಾಯಿಸಿದ ಸಂಜೋತಾರ ಇಲ್ಲಿನ ಕಥೆಗಳ ಓದು ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ
ಆಕರ್ಷಕವಾಗಿ ಓದಿಸಿಕೊಳ್ಳುವ ಕಥೆ. ಲಾಸ್ ವೇಗಾಸ್ನ ಹೊಸ ಪ್ರಪಂಚ ಕನ್ನಡ ಓದುಗರಿಗೆ ಮುದ ಕೊಡುವಂತೆ ವಿವರವಾಗಿ ಬಂದಿದೆ. ಜುಗಾರಿಯನ್ನು ಧನಾತ್ಮಕವಾಗಿ ಉಪಯೋಗಿಸಿಕೊಳ್ಳುವ ನಾಯಕ ನಮ್ಮ ವಿಶೇಷ ಅನುಕಂಪವನ್ನು ಗಳಿಸುತ್ತಾನೆ. ಸ್ನೇಹಿತ ಮತ್ತು ಪತ್ನಿಯಿಂದ ಮೋಸ ಹೋದ ಅವನ ಮನಸ್ಥಿತಿ ದುಃಖ ತರಿಸಿತು. ಈ ಕಥೆಗೆ ಇಂತಹದೇ ಅಂತ್ಯವೆಂಬುದು ಇಲ್ಲ. ಅದು ಬದುಕಿನ ನಿರಂತರತೆಗೆ ಸಂಕೇತವಾಗಿ ನಿಂತಿದೆ.
ಗಮನ ಸೆಳೆಯುವ ಕಥೆ. ದೇಶದಾಚೆ ಈ ಕಥೆ ಅಡ್ಡಾಡುತ್ತದೆ. ಸಮುದಾಯಗಳ ಒಳತೋಟಿ; ಅನಾಥ ಪ್ರಜ್ಞೆಯ ನಡುವೆಯೂ ಬದುಕಿನ ಉತ್ಕಟತೆಯಿಂದ ಕಥೆ ಕಾಡುವ ಗುಣವನ್ನು ಹೊಂದಿದೆ. ವಿವರಗಳ ಸಾತತ್ಯ ಮತ್ತು ನಿರೂಪಣೆಯ ಸರಾಗತೆಯೂ ಕಥೆಯನ್ನು ಮಾಗಿಸಿದೆ. ವಲಸೆಯ ಬದುಕಿಗೆ ಏಕಮುಖತೆ ಇರುವುದೇ ಇಲ್ಲ; ಅದು ಸಮುದಾಯಗಳ ಬದುಕು ಎಂದೇ ಅರಿಯಬೇಕು. ಇಂಥ ಕಡೆ ನಿಂತ ನೆಲ ಮತ್ತು ಬದುಕು ಏಕತ್ರವಾಗಿ ಬಿಡುತ್ತವೆ. ಸಮಕಾಲೀನ ವಿದ್ಯಮಾನಗಳ ನಡುವೆಯೂ ಈ ಕಥೆ ಅನೇಕ ಹೊಳಹುಗಳನ್ನು ನೀಡುತ್ತದೆ.
ಹದವಾದ ಕಥೆ. ಇಳಿ ವಯಸ್ಸಿನ ಲವಲವಿಕೆ, ಜೀವಂತಿಕೆ, ಭಿನ್ನ ವ್ಯಕ್ತಿಗಳ ಮಧ್ಯದ ಸ್ನೇಹ, ಕೊಂಚ ವಿಷಾದ - ಇವೆಲ್ಲವನ್ನು ಕೊಂಚವೂ ಅತಿ ಮಾಡದೇ, ವಿವರಗಳಲ್ಲೇ ಕಳೆದೂ ಹೋಗದೇ ಕಟ್ಟಿಕೊಟ್ಟಿದ್ದಾರೆ. ಈ ಕಥೆಯ ಚೌಕಟ್ಟು ಎಷ್ಟು ಚೆನ್ನಾಗಿದೆಯೆಂದರೆ ಮಿಸ್.ಬ್ರೆಂಡಾ ಮನಸ್ಸಿನಲ್ಲಿ ಏನಿದೆ ಎಂದು ಭಾಗಶಃ ಕಥೆಗಾರರು ಹೇಳುವುದೇ ಇಲ್ಲ. ಬ್ರೆಂಡಾ ವಾಚಾಳಿ ಅಲ್ಲ, ಅವಳು ಕಿರಿಕಿರಿ ಅಲ್ಲ, ಅವಳ ಜೀವಂತಿಕೆ ಇರುವುದು ಅವಳ ಕೆಲಸದಲ್ಲಿ, ಅವಳ ಮೌನದಲ್ಲಿ.
Author
Sanjota Purohit
Binding
Soft Bound
Number of Pages
188
Publication Year
2025
Publisher
Harivu Books
Height
2 CMS
Length
22 CMS
Weight
200 GMS
Width
14 CMS
Language
Kannada