Product Description
‘ಮೌನಿ’ ಅನಂತಮೂರ್ತಿಯವರ ಮೂರನೆಯ ಕಥಾಸಂಗ್ರಹ. ಈ ಸಂಗ್ರಹದಲ್ಲಿ ಸಾಕಷ್ಟು ಚರ್ಚೆಗೊಳಗಾದ ‘ಕ್ಲಿಪ್ ಜಾಯಿಂಟ್’, ‘ಮೌನಿ’ ಹಾಗೂ ‘ನವಿಲುಗಳು’ ಎಂಬ ಮೂರು ಕತೆಗಳಿವೆ. ‘ಪ್ರಶ್ನೆ’ ಹೊರಬಂದ ಒಂಬತ್ತು ವರ್ಷಗಳ ನಂತರ ಪ್ರಕಟವಾದ ಈ ಸಂಗ್ರಹದ ಕತೆಗಳಲ್ಲಿ ಗಮನಾರ್ಹವಾದ ಹೊಸ ಬೆಳವಣಿಗೆಗಳಿವೆ... ಈ ಕತೆಗಳ ರಚನೆಯ ನಾವೀನ್ಯ ತಂತ್ರದ ದೃಷ್ಟಿಯಿಂದ ಹೊಸ ಶೋಧವಾಗಿದೆ. ತೀವ್ರವಾದ ಆತ್ಮಪ್ರಜ್ಞೆ ಹಾಗೂ ಕಾಲವನ್ನು ಕುರಿತ ಸಮಗ್ರ ಕಲ್ಪನೆಗಳಿಂದಾಗಿ ಅಂತರಂಗ ಬಹಿರಂಗಗಳನ್ನು, ಭೂತ ವರ್ತಮಾನಗಳನ್ನು ಒಂದೇ ಗ್ರಹಿಕೆಯಲ್ಲಿ ಒಳಗೊಳ್ಳಬಲ್ಲ ಹಾಗೂ ಏಕಕಾಲಕ್ಕೆ ಹಲವಾರು ಸ್ತರಗಳಲ್ಲಿ ಕ್ರಿಯಾಶೀಲವಾಗಬಲ್ಲ ರಚನೆ ಈ ಕತೆಗಳಲ್ಲಿ ಅನಿವಾರ್ಯವಾಗಿ ಬರುತ್ತದೆ.