Quantity
Product Description
ಜನಪ್ರಿಯ ಲೇಖಕ ಡಾ.ಡಿ.ವಿ.ಗುರುಪ್ರಸಾದ್ ಅವರು ಕಾನೂನು, ಅಪರಾಧ, ಗೂಡಚರ್ಯೆ ಮುಂತಾದ ವಿಷಯಗಳಲ್ಲದೇ ಪ್ರವಾಸ ಲೇಖನಗಳನ್ನು ಬರೆಯುವುದರಲ್ಲಿಯೂ ಸಿದ್ಧ ಹಸ್ತರು. ಕಳೆದ ಕೆಲವು ದಶಕಗಳಿಂದ ಅವರು ಹೆಸರಾಂತ ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿರುವುದಲ್ಲದೇ ಒಟ್ಟು ಏಳು ಪ್ರವಾಸಿ ಕಥನಗಳನ್ನು ರಚಿಸಿದ್ದಾರೆ. ಶ್ರೀಯುತರು 56 ದೇಶಗಳನ್ನು ಈಗಾಗಲೆ ನೋಡಿದ್ದು ಇವರ ಪಟ್ಟಿಯಲ್ಲಿ ಇನ್ನೂ 20 ದೇಶಗಳಿವೆ.
ತಾವು ಇಲ್ಲಿಯವರೆಗೆ ನೋಡಿರುವ ಸ್ಥಳಗಳನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ವಿವರಿಸುವ ಇವರ ಶೈಲಿ ಮನಮೋಹಕವಾದದ್ದು. ಓದುಗರಿಗೆ ತಾನೇ ಪ್ರವಾಸ ಹೋದಂತೆ ಅನುಭವ ಕೊಡುವ ಅವರ ಪುಸ್ತಕಗಳ ಸಾಲಿಗೆ ಹೊಸದಾಗಿ ಸೇರುತ್ತಿರುವ ಈ ಪುಸ್ತಕ ಬಹಳ ಕಡಿಮೆ ಜನರು ಪ್ರವಾಸ ಮಾಡುತ್ತಿದ್ದ ಮಧ್ಯ ಏಷ್ಯಾ ರಾಷ್ಟ್ರಗಳ ಕುರಿತಾಗಿದೆ. ಇದು ಶ್ರೀಯುತರ 92ನೇ ಪುಸ್ತಕವೂ ಆಗಿದೆ
Author
Dr D V Guruprasad
Binding
Soft Bound
ISBN-13
9788197927386
Number of Pages
160
Publication Year
2025
Publisher
Veeraloka Books Pvt Ltd
Height
1 CMS
Length
22 CMS
Weight
200 GMS
Width
14 CMS
Language
Kannada