Quantity
Product Description
ಹೃದಯ ಶಿವ ಕನ್ನಡ ಚಲನಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತರಚನಾಕಾರರು. ಅಷ್ಟು ಮಾತ್ರವಲ್ಲದೆ, ಕನ್ನಡದಲ್ಲಿ ಅತ್ಯುತ್ತಮ ಕವನಗಳನ್ನು ರಚಿಸಿ ಕಾವ್ಯ ಕಣಜವನ್ನು ಸಮೃದ್ಧಗೊಳಿಸಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಕನ್ನಡ ಸಾಹಿತ್ಯದೊಂದಿಗೆ ಗಂಭೀರ ಸೃಜನಶೀಲ ಅನುಸಂಧಾನ ನಡೆಸುತ್ತಲೇ ಇದ್ದಾರೆ. ಚಲನಚಿತ್ರರಂಗದ ಜನಪ್ರಿಯತೆಯ ಪ್ರವಾಹದಲ್ಲಿ ಹರಿದು ಹೋಗುವ ಜಾಯಮಾನ ಇವರದಲ್ಲ.
'ಅಲ್ಲಿಂದಿಲ್ಲಿಗೆ' ಸಂಕಲನದ ಅನುವಾದಿತ ಕವನಗಳು ಹೃದಯ ಶಿವ ಅವರ ಸಾಹಿತ್ಯದ ಶ್ರೇಷ್ಠ ಅಭಿರುಚಿಗೆ ಕನ್ನಡಿಯಂತಿವೆ. ಜಗತ್ತಿನ ಕೆಲವು ಶ್ರೇಷ್ಠ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಹೃದಯ ಶಿವ ಅವರು, ಕಾವ್ಯದ ಆತ್ಮ ಮತ್ತು ಭಾವ ಸಂವೇದನೆಯನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಇವು ಅನುವಾದದಂತೆ ಭಾಸವಾಗದೆ ಕನ್ನಡದ್ದೇ ಕವಿತೆಗಳೆಂಬಂತೆ ಮೂಡಿಬಂದಿವೆ. ಕನ್ನಡ ಕಾವ್ಯದ ಲಾಲಿತ್ಯ ಇಲ್ಲಿನ ಎಲ್ಲ ಕವಿತೆಗಳ ಮೈಗಂಟಿದೆ. 'ಅಲ್ಲಿಂದಿಲ್ಲಿಗೆ' ಸಂಕಲನದ ಬಹುಪಾಲು ಕವಿತೆಗಳು ಮೊದಲ ಓದಿಗೆ ಭಾವ
Binding
Soft Bound
Author
Hrudaya Shiva
Number of Pages
100
Publisher
Harivu Books
Publication Year
2025
Height
1 CMS
Length
22 CMS
Weight
100 GMS
Width
14 CMS
Language
Kannada