Select Size
Quantity
Product Description
ಘಾಂದ್ರುಕ್’ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರ ಕಾದಂಬರಿ. ಪೂರ್ವ ಪಶ್ಚಿಮಗಳ ಸಂಗಮವಾಗಿರುವ ಈ ಕಾದಂಬರಿ, ಬದುಕೆಂಬ ಮಾಯಾಲೋಕದಲ್ಲಿ ಎಂದೆಂದಿಗೂ ಮುಗಿಯದ ಹುಡುಕಾಟವೊಂದರ ಬೆನ್ನತ್ತಿ ಸಾಗುತ್ತದೆ. ಈ ಕೃತಿಯ ಕುರಿತು ಬರೆದಿರುವ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರು 'ಫಾಂದ್ರುಕ್’ ನಮ್ಮಲ್ಲಿ ತೀವ್ರ ಅಸಕ್ತಿ ಹುಟ್ಟಿಸುವುದು ಅದರ ಭೌಗೋಳಿಕ ವಿಸ್ತಾರ ಮತ್ತು ಮಾನವೀಯ ಸಂಬಂಧಗಳ ಆಕರ್ಷಣೆಯಿಂದಾಗಿ ಎಂದಿದ್ದಾರೆ. ಹಾಗೆ ‘ನಮ್ಮ ದಕ್ಷಿಣ ಕನ್ನಡದಿಂದ ಹಿಡಿದು ಹಿಮಾಲಯದ ತಪ್ಪಲು, ನೇಪಾಳ, ಅಲ್ಲಿನ `ಫಾಂದ್ರುಕ್’ ಎಂಬ ಹಳ್ಳಿ , ಅನ್ನಪೂರ್ಣ ಶಿಖರ, ಗಂಡಕಿ ನದಿ – ಹೀಗೆ ಪ್ರಕೃತಿ, ಸೃಷ್ಟಿ ಮತ್ತು ಮಾನವ ಬದುಕಿನ ಗತ, ಲಯಗಳು ಒಂದರೊಳಗೊಂದು ಬೆಸೆದುಕೊಂಡು ಅನಾವರಣಗೊಳ್ಳುವ ಈ ಕಾದಂಬರಿಯ ಕಥನದಲ್ಲಿ ಒಂದಕ್ಕಿಂತ ಹೆಚ್ಚು ಆಯಾಮಗಳಿವೆ. ಈ ಕಾದಂಬರಿಯ ಮೂಲ ಮೌಲ್ಯಗಳು ಚಿಂತನೆ ಇರುವುದು ನೇಪಾಳವೂ ಸೇರಿದಂತೆ, ಭಾರತೀಯ ಸಂಸ್ಕೃತಿಯಲ್ಲೇ. ಇದಕ್ಕೆ ಆಧುನಿಕ ಯುಗದಲ್ಲಿ ಮೂಡಿರುವ ಆಯಾಮಗಳು ಈ ಬದುಕನ್ನು ಹೆಚ್ಚು ಸಂಕೀರ್ಣಗೊಳಿಸಿವೆ. ಚಿಂತನೆಯಲ್ಲಿ ಸ್ವಲ್ಪ ಗೊಂದಲ ಅರಾಜಕತೆಗಳಿಗೆಡೆ ಮಾಡಿಕೊಟ್ಟಿವೆ. ಹೊಸ ಆಯಾಮಗಳನ್ನೊಳಗೊಂಡ ವರ್ತಮಾನದ ಆಧುನಿಕ ಬದುಕಿನ ಶೋಧವೇ ಕಾದಂಬರಿಯ ಧ್ಯೇಯ ಉದ್ದೇಶಗಳು ಎಂದೇ ಇದನ್ನು ನವ್ಯೋತ್ತರ `ನವ್ಯ’ ಕಾದಂಬರಿ ಎಂದು ಕರೆಯಬಹುದೇನೋ ಎಂದಿದ್ದಾರೆ
Author
Satish Chapparike
Publication Year
2023
Number of Pages
424
ISBN-13
9789392230653
Publisher
Ankitha Pusthaka
Binding
Hard Bound
Width
10 CMS
Length
10 CMS
Height
1 CMS
Weight
400 GMS
Language
Kannada