Product Description
ಭಾರತೀಯ ಗಣಿತ-ಖಗೋಲ ವಿಜ್ಞಾನದ ವ್ಯವಸ್ಥಿತ ಪದ್ಧತಿಯ ಹರಿಕಾರ ಹಾಗೂ ಆದ್ಯ ಪ್ರವರ್ತಕನೆಂದು ವಿಶ್ವಮಾನ್ಯನಾದ ಆರ್ಯಭಟನ (ಜನನ : ಕ್ರಿ.ಶ.476) ಮೇರುಕೃತಿಯಾದ “ಆರ್ಯಭಟೀಯಮ್” ಸಂಸ್ಕೃತ ಕೃತಿಯ ಮೂಲದೊಂದಿಗೆ ಸಂಪೂರ್ಣ ಕನ್ನಡಾನುವಾದ ಹಾಗೂ ಗಣಿತ ವಿವರಣೆಗಳನ್ನು ಒಳಗೊಂಡ ವಿಶಿಷ್ಟ ಕೃತಿ.
ಈ ಪುಸ್ತಕದಲ್ಲಿ “ಆರ್ಯಭಟೀಯಮ್”ನ ನಾಲ್ಕು ಪಾದಗಳಲ್ಲಿರುವ 121 ಶ್ಲೋಕಗಳ ಸರಳ ಕನ್ನಡದಲ್ಲಿ ಅನುವಾದವನ್ನು ಗಣಿತೀಯ ವಿವರಣೆಗಳೊಂದಿಗೆ ನೀಡಲಾಗಿದೆ. ಓದುಗರ ಅನುಕೂಲಕ್ಕಾಗಿ ಅವಶ್ಯವಾಗಿರುವಲ್ಲಿ ಆಂಗ್ಲ ಸಮಾನಪದಗಳನ್ನು ನೀಡಲಾಗಿದೆ. ಪುಸ್ತಕದ ಕೊನೆಯ ಭಾಗದಲ್ಲಿ ಬಹಳ ಉಪಯುಕ್ತವಾದ ಮೂರು ‘ಪರಿಶಿಷ್ಟ’ಗಳನ್ನು ಸೇರಿಸಲಾಗಿದೆ.