Quantity
Product Description
ಈ ರೀತಿಯ ಅಂಕಣವನ್ನು ಬರೆಯುವುದು, ಪೊರೆಯುವುದು ಸುಲಭವಲ್ಲ. ಪ್ರತಿದಿನವೂ ಹೊಸ ಹೊಸ ವಿಚಾರ, ಕತೆ, ಪ್ರಸಂಗ, ದೃಷ್ಟಾಂತ, ಸಂಗತಿಗಳನ್ನು ಹೇಳುವುದು ಸವಾಲೇ ಸರಿ, ಅಲ್ಲದೇ ಆ ದಿನದ ವಿಷಯಕ್ಕೆ ಹೊಂದಾಣಿಕೆಯಾಗುವ ಪ್ರಸಂಗವನ್ನು ಜೋಡಿಸುವುದು ಸಹ. ಇದಕ್ಕೆ ಸಾಕಷ್ಟು ಅಧ್ಯಯನ, ಚರ್ಚೆ, ಸಂವಾದ, ಓದು ಅಗತ್ಯ. ಇದನ್ನು ಒಂದು ವ್ರತದಂತೆ ರೂಪಾ ಮಾಡುತ್ತಾ ಬಂದಿದ್ದಾರೆ. ಬೆಳಗ್ಗೆ ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ, ಅಯಾಚಿತವಾಗಿ 'ಒಂದೊಳ್ಳೆ ಮಾತು' ಅಂಕಣದತ್ತ ದೃಷ್ಟಿ ಹೊರಳುವ ಹಾಗೆ ಮಾಡಿದ್ದಾರೆ. ಇದು ಆ ಅಂಕಣವನ್ನು ಗೆಲ್ಲಿಸಿದ ರೂಪಾ ಅವರ ಸಾಧನೆಯೇ, ಈ ಅಂಕಣದಿಂದ ಅನೇಕರಿಗೆ ಪ್ರೇರಣೆ, ನೆಮ್ಮದಿ, ಸಮಾಧಾನ, ಸಂತಸ, ಸಾಂತ್ವನ ಸಿಕ್ಕಿದೆ, ಬೇಸರದಲ್ಲಿದ್ದವರಿಗೆ, ಮೂಡು ಕೆಡಿಸಿಕೊಂಡವರಿಗೆ ಒಂದು ಹಿಡಿ ಸಮಾಧಾನವನ್ನು ನೀಡಿದೆ. ಖಿನ್ನಮನಸ್ಕರಾದವರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ. ಈ ಬದುಕೇ ಇಷ್ಟು ಎಂದು ಹತಾಶರಾದವರಿಗೆ ಭರವಸೆಯ ಬದುಕಿನ ಬದುವನ್ನು ತೋರಿಸಿದೆ. ಇವ್ಯಾವವೂ ಇಲ್ಲದ ಓದುಗರಿಗೆ ಓದಿನ ಸಹಜ ಸುಖವನ್ನು ನೀಡಿದೆ. ಒಂದು ಅಂಕಣದ ಸಾರ್ಥಕ್ಯ ಇದೇ ಅಲ್ಲವೇ?
Width
15 CMS
Height
2 CMS
Length
22 CMS
Weight
200 GMS
Author
Roopa Gururaj
Binding
Soft Bound
Publisher
Vishwavani Pusthaka
Language
Kannada