Quantity
Product Description
ಕಥೆ ಕುರಿತಾಗಿ ಬರೆದ ಓ ಹೆನ್ರಿಯ ಈ ಮಾತು ನನಗೆ ತುಂಬಾ ಇಷ್ಟ. "I will give you the whole secret to short story writing. Here it is. Rule 01-right stories that please yourself. There is no rule 02", ಇದು ಸತ್ಯ ಪ್ರಸ್ತುತ ಸಂಕಲನದಲ್ಲಿ ಓರ್ವ ಕಥೆಗಾರನಾಗಿ ನಾನು ಮಾಡಿದ್ದಾದರೂ ಏನು? ಇಷ್ಟೇ, ಹೆನ್ರಿ ಹೇಳಿದಷ್ಟೇ.
ಬಹುತೇಕ ಪ್ರಪಂಚದ ಎಲ್ಲ ಭಾಷೆಗಳಲ್ಲಿಯ ಕಥೆಗಾರರನ್ನು ಓದಿದ ನಂತರವೂ ನನಗೆ ಕಥೆಗಾರರಾಗಿ ಕಾಡಿದವರು ಮುನ್ಷಿ ಪ್ರೇಮಚಂದ್ ಹಾಗೂ ಸಾದತ್ ಹಸನ್ ಮಾಂಟೊ. ನನ್ನ ನೆಲದ ನಾಡಿ ಇವರಿಬ್ಬರು. ನನ್ನ ಅಪ್ಪ ಹೇಳಿದ ಪ್ರೇಮಚಂದ್ರರ ಕಥೆಗಳನ್ನು ಕೇಳುತ್ತ ಬೆಳೆದೆ ಮತ್ತು ನನ್ನ ದೇಶ ಬರೆಯಿಸಿದ ಮಾಂಟೋನ ಕಥೆಗಳನ್ನು ಓದುತ್ತ ನಾನು ಮನುಷ್ಯನಾದೆ. ಮನುಷ್ಯರಾದವರಿಗೆ ಪಂಥ, ಪಕ್ಷಗಳ ಹಂಗಿರುವುದಿಲ್ಲ ಎಂದು ಹೇಳಿದವರು ಇವರು. ಬಹುತೇಕ ಇವರಿಬ್ಬರಂತೆ ನಮ್ಮ ಎದೆಯೊಳಗಿನ ಅಗ್ನಿಕುಂಡಕ್ಕೆ ಕನ್ನಡಿ ಹಿಡಿದ ಲೇಖಕರು ಮತ್ತೊಬ್ಬರಿಲ್ಲ.
ಒಂದು ಸಣ್ಣ ಒಪ್ಪಂದ, ಹೆಮಿಂಗ್ವೇಯನ್ನೂ ಈ ಪಟ್ಟಿಗೆ ಸೇರಿಸಬಹುದು. ಅಂದಹಾಗೆ, ಇವರೆಲ್ಲ ಮನುಷ್ಯರನ್ನು ಬೆನ್ನಟ್ಟಿಸಿಕೊಂಡ ಲೇಖಕರು, ಪ್ರಶಸ್ತಿ ಪುರಸ್ಕಾರಗಳನ್ನು ಅಲ್ಲ.
ಪ್ರಸ್ತುತ 'ಸುಪಾರಿಸ್ವಾಮಿ ಮತ್ತು ಸಕೀನಾ' ಸಂಕಲನದ ಎಲ್ಲ ಪಾತ್ರಗಳು ನನ್ನ ಕಲ್ಪನೆಯ ಸೃಷ್ಟಿಗಳಲ್ಲ. ನನ್ನ ಸಂಕಟದ ಪ್ರತಿಫಲಗಳು. ಸುಮಾರು ಒಂದು ದಶಕ!! ನಾನು ಇವರನ್ನು ಕಾಯಿಸಿದೆ. ಆದರೆ, ರಚ್ಚೆ ಹಿಡಿದು ಕುಳಿತ ಇವರು ಮನದ ಮನೆಯಿಂದ ತೊಲಗಲೇ ಇಲ್ಲ!!.
ಕಾಯಿಸಿದ ನಂತರವೂ ಕಾಡಿದವರನ್ನು ದಾಖಲಿಸದೆ ಹೋದರೆ...? ಆತ್ಮವಂಚನೆಯಾದೀತು ಎನ್ನುವ ಕಾರಣಕ್ಕೆ ಅವರನ್ನು ದಾಖಲಿಸಿ ನಿಮಗೆ ಕೊಡುತ್ತಿದ್ದೇನೆ. ನನ್ನನ್ನು ಕಾಡಿದ ಈ 'ಪಾಪಿಗಳು!!??' ನಿಮ್ಮನ್ನೂ ಕಾಡಿದರೆ ಅದು ಬರಹದ 'ಪುಣ್ಯ' ಎಂದುಕೊಳ್ಳುತ್ತೇನೆ.
ಮನುಷ್ಯರು ಮನುಷ್ಯರನ್ನು ಕಾಡಿಯೇ ಕಾಡುತ್ತಾರೆ ಎಂಬ ಭರವಸೆ ನನಗೆ
Author
Ragam
Binding
Soft Bound
ISBN-13
9789348355539
Number of Pages
104
Publication Year
2025
Publisher
Veeraloka Books Pvt Ltd
Height
1 CMS
Length
22 CMS
Weight
100 GMS
Width
14 CMS
Language
Kannada