Select Size
Quantity
Product Description
ಶ್ರೀಮತಿ ಜಯಶ್ರೀ ದೇಶಪಾಂಡೆಯವರು ಸಾಹಿತ್ಯ ಕ್ಷೇತ್ರದ ಹಳೆಯ ಹುಲಿ. ಎಷ್ಟೋ ವರ್ಷಗಳ ಹಿಂದೆಯೇ ತಮ್ಮ ಲೇಖಕಿ ಪಟ್ಟಕ್ಕೆ ಒಂದು ಸ್ಥಾಯೀ ಸ್ಥಾನ ಒದಗಿಸಿ ಕೊಟ್ಟವರು. ಅವರು ಕೈಯಾಡಿಸದ ಸಾಹಿತ್ಯ ಕ್ಷೇತ್ರವೇ ಇಲ್ಲವೆನ್ನಬಹುದು. ಕಾದಂಬರಿ, ಕವನ, ಕಥೆಗಳು, ಪ್ರವಾಸ ಕಥನಗಳು, ಲಘು ಹಾಸ್ಯದ ಬರಹಗಳು, ಕಾಕಾ-ಉವಾಚಗಳೆಂಬ ಮನೆತನದ ಹಿರಿಯರು ನಡೆದು ಬಂದ ಹಾದಿಯ ಹೆಗ್ಗುರುತುಗಳನ್ನು ಬಿಂಬಿಸುವ ಲಘು ಬರಹಗಳ ಸಂಗ್ರಹಗಳು... ಏನುಂಟು! ಏನಿಲ್ಲ!
ಎಲ್ಲ ಸ್ತರದ ಓದುಗರನ್ನೂ ಸಂತುಷ್ಟಗೊಳಿಸುವ ತಾಕತ್ತು ಜಯಶ್ರೀ ಅವರ ಪೆನ್ನಿಗಿದೆ. ಒಂದೇ ಲೇಖನದಲ್ಲಿ ಹಲವು ದೇಶಗಳನ್ನು ವಿವಿಧ ಭಾಷೆಗಳನ್ನು ಬದುಕಿನ ವಿವಿಧ ಮಜಲುಗಳನ್ನು ಬದುಕಿನ ಹೊಸಹೊಸ ಬಣ್ಣಗಳನ್ನು ಚಿತ್ರಿಸಿ ಅದನ್ನು ಅದ್ಭುತವಾಗಿ ಅಂದಗೊಳಿಸುವ ಅವರ ಪರಿ ನನಗೊಂದು ತೀರದ ಅಚ್ಚರಿ. ಮನುಷ್ಯ ಪಾತ್ರಗಳನ್ನೂ ಮೀರಿ ನಿಲ್ಲುವ ಪ್ರಾಣಿ ಪ್ರಪಂಚ ಅವರ ಲೇಖನಿಗಳಲ್ಲಿ ಬಿಚ್ಚಿಕೊಳ್ಳುವ ಪವಾಡ ನೋಡಬೇಕು. ಪ್ರಪಂಚದ ಮೂಲೆ ಮೂಲೆಗಳು ಬಸ್ಸು, ರೇಲ್ವೆಗಳು, ಗದ್ದಲ- ಮೌನಗಳೂ ಒಟ್ಟಿನಲ್ಲಿ ಕಣ್ಣಿಗೆ ಕಾಣಿಸಿಕೊಳ್ಳುವ ಒಂದು ಕಡ್ಡಿ ಕೂಡ ಅವರ ಅಚ್ಚಿನಲ್ಲಿ ಹೊಕ್ಕು ಏನೋ ಹೊಸ ರೂಪದಲ್ಲಿ ಹೊಸ ವೇಷದಲ್ಲಿ ನಮ್ಮ ಮುಂದೆ ಬಂದು ನಿಲ್ಲುತ್ತದೆ.
ಕಥನ ಶೈಲಿ ಸಿದ್ಧಿಸಿರುವ ಜಯಶ್ರೀ ದೇಶಪಾಂಡೆ ಅವರ ‘ಬಿಂಬ’ ಕಥಾಸಂಕಲನದ ಈ ಹತ್ತು ಕಥೆಗಳು ಕೈಗೆತ್ತಿಕೊಂಡು ಓದಿದವರ ಮನಸ್ಸನ್ನು ನೂರಾರು ಬಗೆಯ ಚಿಂತನೆಗಳಿಗೆ ಪ್ರೇರೇಪಿಸುವುದು ನಿಶ್ಚಿತ.
- ಕೃಷ್ಣಾ ಕೌಲಗಿ
(ಮುನ್ನುಡಿಯಿಂದ)
Weight
300 GMS
Length
22 CMS
Author
Jayashree Deshpande
Publisher
Panchami Media Publications
Publication Year
2023
ISBN-10
9788196705619
Number of Pages
144
Binding
Soft Bound
Language
Kannada