ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ ಕನ್ನಡದಲ್ಲಿ ಅಪೂರ್ವ ಎನಿಸುವ ಒಂದು ಕೃತಿ. ವಿಷಯ ತಜ್ಞರು ಭಾಷಾ ತಜ್ಞರು ಮತ್ತು ಪ್ರಕಾಶಾಕರು ಒಗ್ಗೂಡಿ ನಡೆಸಿದ ಕೆಲಸದ ಫಲ. ತಾಂತ್ರಿಕ ಪದ ಒಂದರ ತಿರುಳನ್ನು ಅಥವಾ ಅದಕ್ಕೆ ಸಂವಾದಿಯಾದ ಇಂಗ್ಲಿಷ್ ಅಥವಾ ಕನ್ನಡ ಪದವನ್ನು ತಿಳಿದುಕೊಳ್ಳಬೇಕೆನಿಸುವ ಯಾರೇ ಆಸಕ್ತ ವ್ಯಕ್ತಿಗೆ ಉಪಯುಕ್ತವಾಗುವಂತೆ ಕೃತಿ ರೂಪುಗೊಂಡಿದೆ. ಮಾಹಿತಿ-ಜೈವಿಕ-ನ್ಯಾನೊಗಳಂಥ ಕ್ಷೇತ್ರಗಳಲ್ಲಿ ಬರುತ್ತಿರುವ ಹೊಸ ಪದಗಳು ಈ ಪದಸಂಪದದ ರಚನೆಯಲ್ಲಿ ಗಮನ ಸೆಳೆಯುತ್ತವೆ. ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ದಾಖಲೆ ಎನಿಸಿದ್ದ ನವಕರ್ನಾಟಕ ವಿಜ್ಞಾನ ಪದವಿವರಣ ಕೋಶದ ಆನಂತರ ಹೊಸದೇ ಕೃತಿಯಾಗಿ ಬಂದಿರುವ ನವಕರ್ನಾಟಕ ವಿಜ್ಞಾನ - ತಂತ್ರಜ್ಞಾನ ಪದಸಂಪದ ಓದುಗಸ್ನೇಹಿಯಾಗಿ ಮತ್ತೊಂದು ದಾಖಲೆ ನಿರ್ಮಿಸುತ್ತಿದೆ.