Quantity
Product Description
ಅರ್ಜುನ್ ದೇವಾಲದಕೆರೆ ಅವರು ಬರೆದಿರುವ ಒಂದು ಅಲೌಕಿಕ ಪ್ರೇಮ ಕಥೆ ಅತೀತ. ಗಿರಿಮನೆ ಶ್ಯಾಮರಾವ್ ಅವರು ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ನಮ್ಮೂರಿನವರು. ಪಶ್ಚಿಮಘಟ್ಟದ ಕಾಡೊಳಗಿಂದ ಎದ್ದು ಬಂದವರು. ಹಾಗಾಗಿ ಅವರಿಗೆ ಮಲೆನಾಡಿನ ಪಟ್ಟು,ವರಸೆಗಳೆಲ್ಲವೂ ಕರಗತ. ಮಲೆನಾಡಿನಲ್ಲೇ ಹುಟ್ಟಿದವರಿಗಲ್ಲದೆ ಬೇರೆಯವರಿಗೆ ಮಲೆನಾಡಿನ ರ್ಣನೆ ಸಾಧ್ಯವಿಲ್ಲ. ಅಲ್ಲಿನ ಬದುಕು, ಹಳ್ಳ, ಗದ್ದೆ, ತೋಟ, ಶಿಕಾರಿ, ಅಲ್ಲಿನ ಬೆರಗು ಅಂಥವರೊಳಗೆ ಹಾಸುಹೊಕ್ಕಾಗಿರುತ್ತದೆ. ಮಲೆನಾಡಿನ ಕಾಡೊಳಗೆ ಭೋರ್ಗಗರೆದು ಸುರಿಯುವ ಮಳೆಗಾಲದ ಮಧ್ಯದ ಮಳೆಯ ವರ್ಣನೆಯನ್ನು ಬಯಲು ಸೀಮೆಯಲ್ಲಿ ಹುಟ್ಟಿದವರು ಎಂದಿಗೂ ವರ್ಣನೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಅದನ್ನು ಕೃತಿಯೊಳಗೆ ತರಲು ಒಳನೋಟ ಬೇಕು. ಬರಹ ತಿಳಿದಿರಬೇಕು. ಅದಕ್ಕೊಂದು ರೂಪ ಕೊಡುವ ಶಕ್ತಿ ಬೇಕು. ಅರ್ಜುನ್ ಅವರಿಗೆ ಇದೆಲ್ಲವೂ ಕರಗತವಾಗಿದೆ. ಇದರಲ್ಲಿ ಮೇಲೆ ಹೇಳಿದ ಎಲ್ಲದರ ಸಾರವೂ ಇದೆ. ಕತೆ, ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲಿನ ಆಡುಭಾಷೆಯನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಅದು ಕೃತಿಗೊಂದು ಕಳೆ ತಂದುಕೊಟ್ಟಿದೆ. ಅರ್ಜುನ್ ಅವರಿಗೆ ಬರಹವೂ ಹೊಸತಲ್ಲ. ಈಗಾಗಲೇ ಎರಡು ಕೃತಿಗಳನ್ನು ಹೊರಗೆ ತಂದವರು ಅವರು. ಅತೀತ ಅವರ ಮೂರನೆಯ ಕೃತಿ. ಅವರಿಗೆ ಸಿಟಿಯ ಅನುಭವವೂ ಇದೆ.ಕಾಡು ಬದುಕಿನ ಅನುಭವವೂ ಇದೆ. ಎರಡರ ಸಮ್ಮಿಳನ ಅವರ ಕೃತಿಯಲ್ಲಿ ಮೂಡಿ ಬಂದಿದೆ. ಹಾಗಾಗಿ ಹಳ್ಳಿ ಬದುಕಿನ ತಾಜಾತನದ ಶಿಕಾರಿಯಿಂದ ಹಿಡಿದು ಸಿಟಿ ಬದುಕಿನ ಜೊತೆಗೆ ವಾಮಾಚಾರದ ಭಯಾನಕ ಲೋಕದಲ್ಲೂ ನಿಮ್ಮನ್ನು ಸುತ್ತಾಡಿಸುತ್ತಾರೆ. ಮಲೆನಾಡಿನಲ್ಲೇ ಹುಟ್ಟಿ ಅದರ ಒಳಗೆ ನಿಂತು ನೋಡುತ್ತಾ ಬರೆಯುವವರು ಬೆರಳೆಣಿಕೆಯಷ್ಟು. ಇತ್ತೀಚೆಗೆ ಅವರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚುತ್ತಿದೆ. ಮಲೆನಾಡಿನ ಪರಿಚಯವೂ ಹೊರಜಗತ್ತಿಗೆ ಆಗುತ್ತಿದೆ. ಪಶ್ಚಿಮಘಟ್ಟ ಎಂದಿಗೂ ನಿಗೂಢವೇ. ಎಷ್ಟು ಜನ ಬರೆದರೂ ಅಲ್ಲಿರುವ ಸರಕು ಖಾಲಿಯಾಗುವುದಿಲ್ಲ. ಯುವ ಪೀಳಿಗೆಯ ಬರಹಗಾರರಲ್ಲಿ ಅರ್ಜುನ್ದೇವಾಲದ ಕೆರೆಯವರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದು ಎಂಬುದಾಗಿ ಹೇಳಿದ್ದಾರೆ.
Author
Arjun Devaladakere
Binding
Soft Bound
Number of Pages
250
Publication Year
2022
Publisher
Devaaladakere prakashana
Height
10 CMS
Length
10 CMS
Weight
200 GMS
Width
1 CMS
Language
Kannada