Product Description
ಎಲ್ಲ ಕಾಲಘಟ್ಟಗಳಲ್ಲೂ ಮನುಷ್ಯನನ್ನು ತೀವ್ರವಾಗಿ ಕಾಡುವ ಸಂಗತಿಯೆಂದರೆ ಸಾವು, ಬಹುಶಃ ಸಾವೇ ಇಲ್ಲದಿದ್ದರೆ ಏನಾಗುತ್ತಿತ್ತೆಂದು ಯೋಚಿಸಿ ನೋಡಿ : ಸವಾಲುಗಳೆ ಇರುತ್ತಿರಲಿಲ್ಲ! ನಾವು ಗಳಿಸುವ ವಿದ್ಯೆ, ಸಂಪತ್ತು, ಯಶಸ್ಸು ಮತ್ತು ರೂಢಿಸಿಕೊಳ್ಳುವ ಸಂಬಂಧಗಳು ನಿಂತಿರುವುದೇ ಸಾವಿನ ಅಡಿಪಾಯದ ಮೇಲೆ.
ಇದೊಂದು ಟಿಬೇಟಿಯನ್ನರ ಧಾರ್ಮಿಕ ಕೃತಿ, ಭಗವದ್ಗೀತೆ, ಬೈಬಲ್, ಕುರಾನ್ಗಳಂತೆ ಇದು 1927 ವರೆಗೂ ಧಾರ್ಮಿಕ ಕೃತಿಯಾಗಿಯೇ ಉಳಿದಿತ್ತು. ಟಿಬೇಟಿನಲ್ಲಿ ಮಕ್ಕಳು ಎಂಟು ವರ್ಷ ದಾಟುವ ಹೊತ್ತಿಗೆಲ್ಲ ಈ ಪುಸ್ತಕವನ್ನು ಕಂಠಪಾಟ ಮಾಡಲು ತೊಡಗುತ್ತಿದ್ದರು. ಆದರೆ 1927ರಲ್ಲಿ ಬ್ರಿಟನ್ನಿನಲ್ಲಿ ನೆಲೆಸಿದ್ದ ಆಸ್ಟ್ರಿಯನ್ ಡಬ್ಲ್ಯೂ.ವೈ. ಈವಾನ್ಸ್-ವೆಂಟ್ಜ್ ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿದಾಗ, ಅದಕ್ಕೆ ಆ ಕಾಲದ ಜಗತ್ಪ್ರಸಿದ್ಧ ಮನೋತಜ್ಞ ಕಾರ್ಲ್ ಯೂಂಗ್ ಬರೆದ ವಿಸ್ತೃತವಾದ, ಪಾಂಡಿತ್ಯಪೂರ್ಣ ಮುನ್ನುಡಿಯಿಂದಾಗಿ ವಿಸ್ಮಯಕಾರಿ ಮನಃಶಾಸ್ತ್ರೀಯ ಗ್ರಂಥವೆನ್ನುವ ಖ್ಯಾತಿಯನ್ನು ಗಳಿಸಿತು.
ಇಂದು ಈ ಕೃತಿಯನ್ನು ಆಧ್ಯಾತ್ಮಿಕ ಪಥದಲ್ಲಿರುವವಉ ಮಾತ್ರವಲ್ಲದೆ ಸರ್ರಿಯಲಿಸ್ಟ್ ಕಲಾವಿದರು, ಖಗೋಳ ವಿಜ್ಞಾನಿಗಳು, ಸೂಫಿಗಳು, ಮುಂತಾಗಿ ಎಲ್ಲರೂ ಬೆಡ್ಸೈಡ್ ಪುಸ್ತಕವನ್ನಾಗಿಸಿಕೊಂಡಿದ್ದಾರೆ. ಇದು ಸಾವನ್ನು ಕುರಿತ ಪುಸ್ತಕವಾದರೂ ಈ ಕ್ಷಣದ ಬದುಕನ್ನು ಕುರಿತು ಸಾಕಷ್ಟು ಒಳನೋಟಗಳನ್ನು ಉಂಟು ಮಾಡುತ್ತದೆ.