Quantity
Product Description
ನಮ್ಮ ಸಂವಿಧಾನಕ್ಕೆ ನಮ್ಮ ಪ್ರಜಾಪ್ರಭುತ್ವಕ್ಕೆ, ನಮ್ಮ ಗಣರಾಜ್ಯಕ್ಕೆ ಹಿಂದೆಂದೂ ಕಂಡರಿಯದಂಥ ಗಂಡಾಂತರಗಳು ಎದುರಾಗಿವೆ. ಕಳೆದ, ನೂರು ವರ್ಷಗಳಿಂದ ಸದ್ದಿಲ್ಲದೆ ಬೆಳೆದು ಬಂದಿರುವ ಕೋಮುವಾದಿ ದೇಶಿ ಫ್ಯಾಶಿಜಮ್ ಇಂದು ದೇಶವ್ಯಾಪಿ ವಿಷವೃಕ್ಷವಾಗಿ ಬೆಳೆದುನಿಂತಿದೆ. ದೇಶದ ಎಲ್ಲ ಪ್ರಜಾಪ್ರಭುತ್ವವಾದಿ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನಮ್ಮ ಪ್ರಜಾಸತ್ತೆಯನ್ನು ಒಂದು ವಿಕರಾಳ ಪ್ರಹಸನವನ್ನಾಗಿ ಮಾರ್ಪಡಿಸಿದೆ. ಪ್ರತ್ಯೇಕವಾಗಿ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಾದ ನ್ಯಾಯಾಂಗದೆಡೆಗೂ ತನ್ನ ಕರಾಳ ಹಸ್ತವನ್ನು ಚಾಚಿ ಕಬಳಿಸಲು ಹವಣಿಸುತ್ತಿದೆ. ನಮ್ಮ ದೇಶದಲ್ಲಿಯ ಒಂದೆರಡು ಎಡಪಂಥೀಯ ಪಕ್ಷಗಳು ಮತ್ತೆ ಕೆಲವು ಪಕ್ಷಗಳಲ್ಲಿಯ ಕೆಲವೇ ಕೆಲವು ಮುಖಂಡರನ್ನು ಬಿಟ್ಟರೆ, ಉಳಿದೆಲ್ಲ ಪಕ್ಷಗಳಿಗೂ ಮತ್ತು ಕೋಟ್ಯಾಂತರ ಜನಸಾಮಾನ್ಯರಿಗೂ ಫ್ಯಾಶಿಸ್ಟ್ ದುಶ್ಯಕ್ತಿಗಳ ನಿಜವಾದ ಅಪಾಯದ ಬಗ್ಗೆ ಹೆಚ್ಚಿನ ತಿಳುವಳಿಕೆಯಿಲ್ಲ. ತಿಳಿವಳಿಕೆಯುಳ್ಳ" ಬುದ್ಧಿಜೀವಿಗಳು, ಕಲಾವಿದರು ಹಾಗೂ ಪ್ರತಕರ್ತರಲ್ಲಿ ಹೆಚ್ಚಿನವರು ಮುಂಚೂಣಿಗೆ ಬಂದುನಿಂತು, ಎಚ್ಚರಿಕೆಯ ಗಂಟೆ ಬಾರಿಸುವ ಧೈರ್ಯ ತೋರುತ್ತಿಲ್ಲ. ಅದರಲ್ಲಿಯೂ ವಿಶೇಷವಾಗಿ, ಕೆಲವೇ ಕೆಲವು ರಾಜಕಾರಣಿಗಳು ಹಾಗೂ ಪತ್ರಕರ್ತರು ಫ್ಯಾಶಿಸ್ಟ್ ದುರುಳ ಶಕ್ತಿಯನ್ನು ಎದುರಿಸುವ ಧೈರ್ಯ ತೋರುತ್ತಿದ್ದಾರೆ. ಅಂಥವರಲ್ಲಿ ಎದ್ದುಕಾಣುವ ಹೆಸರು, ಡಾ.ಪರಕಾಲ ಪ್ರಭಾಕರ್ ಅವರದು.
ಫ್ಯಾಶಿಸ್ಟ್ ಶಕ್ತಿಯ ಕಬಂಧ ಬಾಹುಗಳಿಗೆ ಸಿಕ್ಕು ನಲುಗಿ ನರಳುತ್ತಿರುವ ಭಾರತದ ದುರವಸ್ಥೆಯನ್ನು ಕಂಡು ಮರುಗುತ್ತಿರುವ ಡಾ.ಪ್ರಭಾಕರ್ ಅವರು, ಭಾರತದ ಮಹಾಜನತೆಯನ್ನು ಸಕಾಲದಲ್ಲಿ ಎಚ್ಚರಿಸುವ ಮಹತ್ತರ ಉದ್ದೇಶದಿಂದ 'ಕ್ರೂಕ್ಡ್ ಟಿಂಬರ್ ಆಫ್ ನ್ಯೂ ಇಂಡಿಯಾ'-ಎಂಬ ಪುಸ್ತಕವನ್ನು ಪ್ರಕಟಿಸಿ, ವಿಕಾರಗೊಂಡ ದೇಶದ ಮುಖಕ್ಕೆ ಕನ್ನಡ ಹಿಡಿದಿದ್ದಾರೆ. ಅವರ ಈ ಗ್ರಂಥದ ಮಹತ್ವ ಮನದಟ್ಟಾಗಬೇಕಾದರೆ, ಪ್ಯಾಸಿಸಮ್ ನ ಗುಣಲಕ್ಷಣ ಹಾಗೂ ಉದ್ದೇಶಗಳನ್ನು ಸ್ಪಷ್ಟವಾಗಿ ಅರಿಯಬೇಕು.
Author
Parakala Prabhakar and Rahu
Binding
Soft Bound
Number of Pages
300
Publication Year
2024
Publisher
Srushti Publications
Height
3 CMS
Length
22 CMS
Weight
500 GMS
Width
14 CMS
Language
Kannada