Product Description
ಓಟದ ಜೀವನ, ವ್ಯಾಪಾರ-ವ್ಯವಹಾರಾಗಳ ಜಂಜಾಟ, ಕುಟುಂಬದ ನಿರ್ವಹಣೆ, ಸಾಮಾಜಿಕ ಹೊಂದಾಣಿಕೆ ಇತ್ಯಾದಿಗಳು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಅನಾರೋಗ್ಯಕರ ಭಂಗಿಗಳು, ಲಂಬಿತ-ಅವಧಿಯ ಕೆಲಸಗಳು, ಸರಿಯಾದ ಆಹಾರ ಸೇವಿಸದಿರುವುದು, ಪದೇ ಪದೇ ವಾಹನಗಳಲ್ಲಿನ ಓಡಾಟ ಇತ್ಯಾದಿಗಳು. ಇವುಗಳ ಫಲವೇ ಒತ್ತಡ. ಈ ಒತ್ತಡವನ್ನು ಸರಿಯಾಗಿ ನಿರ್ವಹಿಸದಿದ್ದರೆ, ದೇಹ ಮತ್ತು ಮನಸ್ಸು ತೊಂದರೆಗೆ ಸಿಲುಕುತ್ತದೆ. ಅನೇಕರಲ್ಲಿ ತೊಂದರೆಗೆ ಸಿಲುಕುಅವ್ ಮೊದಲ ಅಂಗವೇ ಬೆನ್ನುಗಂಬ. ಪರಿಣಾಮ-ಸೊಂಟ, ಬೆನ್ನು ಮತ್ತು ಕುತ್ತಿಗೆ ನೋವು. ಕೇವಲ ನೋವು-ನಿವಾರಕಗಳಿಂದ, ಮುಲಾಮುಗಳಿಂದ ಈ ಸಮಸ್ಯೆಗಳನ್ನು ದೂರ ಮಾಡುವುದು ಸಾಧ್ಯವಿಲ್ಲ. ದೈಹಿಕ ಹಾಗೂ ಮಾನಸಿಕ ಸ್ತರಗಳಲ್ಲಿ ಸಮಗ್ರವಾಗಿ ಉತ್ತಮತೆಯನ್ನು ತಂದುಕೊಡಬಲ್ಲ ಯೋಗದ ಅಭ್ಯಾಸ ಮಾಡುವುದರಿಂದ ಬೆನ್ನುಗಂಬದ ಆರೋಗ್ಯವನ್ನು ಕಾಪಾಡಿಕೊಂಡು ಸಮಸ್ಯೆಗಳಂದ ಹೇಗೆ ಮುಕ್ತರಾಗಬಹುದೆಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.