Product Description
ದಸ್ ದಿನ್ ಕಾದಂಬರಿ ಪತ್ರಿಕಾ ವರದಿಗಾರನೊಬ್ಬ ತನ್ನ ಊರಿನ ನೆರೆಯ ‘ಪ್ರಕೃತಿ ನಗರ’ದಲ್ಲಿ ‘ಚಮತ್ಕಾರದ ಹೆಣವೊಂದಿದೆ, ಅದನ್ನು ಇಡೀ ನಗರ ಆರಾಧ್ಯ ದೈವವನ್ನಾಗಿ ಕಾಣುತ್ತಿದೆ’ ಎಂಬ ವದಂತಿಗಳಿಂದ ಪ್ರಭಾವಿತನಾಗಿ ಸಹಜ ಕುತೂಹಲದಿಂದ ಅಲ್ಲಿಗೆ ಹೋಗುತ್ತಾನೆ. ಆ ವಿಚಿತ್ರ ನಗರದಲ್ಲಿ ಆತ ಹತ್ತು ದಿನಗಳನ್ನು ಹೇಗೆ ಕಳೆಯುತ್ತಾನೆ ಎಂಬುದು ಕಾದಂಬರಿಯ ವಸ್ತು. ಕಾದಂಬರಿಯಲ್ಲಿ ಕಾಣುವ ರಾಜಕೀಯ, ಸಾಮಾಜಿಕ ಜೀವನದ ಚಿತ್ರಗಳು ಬಹುಶಃ ನಮ್ಮ ದೇಶದ ಯವುದೇ ನಗರದ ವಾಸ್ತವ ಸನ್ನಿವೇಶಗಳಿಗಿಂತ ಬಹಳ ಭಿನ್ನವಾಗೇನೂ ಇಲ್ಲ. ರಾಜಕೀಯ ನಾಯಕರು ಮತ್ತು ಪ್ರಭಾವಿ ವ್ಯಕ್ತಿಗಳು ಮೂಢನಂಬಿಕೆಗಳ ಮತ್ತು ಧರ್ಮಾಂಧತೆಯ ಬೀಜಗಳನ್ನು ಬಿತ್ತಿ ಮುಗ್ಧ ಜನರ ಜೀವನಗಳನ್ನು ಹಾಳುಗೆಡವಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ. ಅತ್ಯಂತ ದಟ್ಟ ಮೋಡಗಳ ಅಂಚಿನಲ್ಲಿ ಬೆಳ್ಳಿಯ ಬೆಳಕು ಕಾಣುವಂತೆ ಈ ವರದಿಗಾರ ನಗರದಲ್ಲಿ ಕೆಲವು ಸಭ್ಯ, ವಿಚಾರವಂತ ಜನರ ಸಂಪರ್ಕವನ್ನು ಪಡೆದು ಎಂತಹ ದುರ್ಭರ ಸನ್ನಿವೇಶದಲ್ಲೂ ಹತಾಶರಾಗಬೇಕಿಲ್ಲ ಎಂಬ ಸತ್ಯವನ್ನು ಮನಗಾಣುತ್ತಾನೆ.