Quantity
Product Description
"ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಈ ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿಯ ಆಶಯವನ್ನು ಹೇಳುವಂತದ್ದು. ಬದುಕಿನ ಬವಣೆಗಳನ್ನು, ಕ್ಲಿಷ್ಟ ಸಮಸ್ಯೆಗಳನ್ನು * ಹಾಳ್ಮೆಯಿಂದ ಧೈರ್ಯದಿಂದ ಅಂತಃಕರಣದಿಂದ ಬಿಡಿಸುತ್ತಾ ಸಾಗಬೇಕೇ ಹೊರತು ಕೋಪತಾಪ ಆತುರದ ನಿರ್ಧಾರಗಳು ಬದುಕನ್ನು ಹಾಳುಗೆಡವುತ್ತವೆಂಬುದನ್ನು ಲೇಖಕಿ ಮಾಲತಿಯವರು ಈ ಕಾದಂಬರಿಯ ಮೂಲಕ ಚಂದದಲ್ಲಿ ಕಟ್ಟಿಕೊಡುತ್ತಾರೆ. ಯುವ ಮನಸ್ಸುಗಳು' ಎದುರಿಸುವ ಅನೇಕ ಸಂಘರ್ಷಗಳಿಗೆ ಪ್ರೀತಿ ಬೆಂಬಲ ಪ್ರೋತ್ಸಾಹದ ಕೊರತೆ ಕಾರಣವಾಗಿರುವುದನ್ನು ಕುರಿತು ಹೇಳುವ ಲೇಖಕಿ, ಹಾಗೆಯೇ ಅತೀ ಕೊಂಡಾಟ ಕೂಡಾ ಅವರನ್ನು ದಿಕ್ಕುಗೆಡಿಸುತ್ತದೆ ಎಂಬ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯನ್ನು ಇಲ್ಲಿ ಕುತೂಹಲಕಾರಿಯಾಗಿ, ಆಪ್ತವಾಗಿ ಚಿತ್ರಿಸಿದ್ದಾರೆ. ತಲ್ಲಣಗಳನ್ನು ಎದುರಿಸುವ ಅದರಿಂದ ಹೊರಬರುವ ಮಾರ್ಗಗಳನ್ನು ಕಥಾನಕ ಸರಳ, ಸುಂದರವಾಗಿ ಚಿತ್ರಿಸಿದರೂ, ಬದುಕೆಂಬುದು ಅಷ್ಟು ಸಲೀಸಲ್ಲ, ಅನೂಹ್ಯವಾದದ್ದು ಎಂಬ ಧ್ವನಿಯೂ ಅಂತರ್ಗತವಾಗಿದೆ. ಆಶಾದಾಯಕ, ಭರವಸೆಯ ದಿಕ್ಕಿನೆಡೆ ಕಥೆ ಮುಖಮಾಡಿರುವುದು ವಿಶೇಷವಾಗಿದೆ.
Author
A P Malathi
Publication Year
2025
Binding
Soft Bound
Number of Pages
212
Publisher
Ankitha Pusthaka
Height
2 CMS
Width
14 CMS
Weight
200 GMS
Length
22 CMS
Language
Kannada