Quantity
Product Description
ಕನ್ನಡದಲ್ಲಿ ಹಲವು ಮಹನೀಯರು ವೃತ್ತಿ ಜೀವನದ ನೆನಪುಗಳನ್ನು ಬರೆದಿದ್ದಾರೆ. ಅವುಗಳ ಪೈಕಿ ನನಗೆ ಥಟ್ಟನೆ ನೆನಪಾಗುವುದು ಎಂ.ಆರ್. ಶ್ರೀನಿವಾಸಮೂರ್ತಿಯವರ `ರಂಗಣ್ಣನ ಕನಸಿನ ದಿನಗಳು', ನವರತ್ನರಾಮ್ ಬರೆದ `ಕೆಲವು ನೆನಪುಗಳು' ಮತ್ತು ಆಕಾಶವಾಣಿಯಲ್ಲಿ ಕಳೆದ `ಕಲಕತ್ತಾ ದಿನಗಳ' ಕುರಿತು ಜ್ಯೋತ್ಸ್ನಾ ಕಾಮತ್ ಕೃತಿ. ಇವೆಲ್ಲ ಸಾಹಿತ್ಯದ ವಿಶಿಷ್ಟ ಪ್ರಕಾರಗಳು. ದಿನದ ಹತ್ತು ಹನ್ನೆರಡು ಗಂಟೆಗಳನ್ನು ಮನೆಯಿಂದ ಹೊರಗೆ ಕಳೆಯುವಂತೆ ಮಾಡುವ ವೃತ್ತಿ ನಮಗೆ ಹೊಸ ಸವಾಲುಗಳನ್ನು ಒಡ್ಡುತ್ತದೆ, ಹೊಸ ಹೊಸ ಅನುಭವ ಮತ್ತು ಒಡನಾಟಗಳನ್ನು ಒದಗುವಂತೆ ಮಾಡುತ್ತದೆ. ಸಾಹಿತ್ಯದ ಮೂಲದ್ರವ್ಯ ಇದೇ ಆಗಿರುವುದರಿಂದ, ಈ ನೆನಪುಗಳಲ್ಲಿ ಕಥನದ ಕುತೂಹಲ ಮತ್ತು ಬದುಕಿನ ಆರ್ದ್ರತೆ ಎರಡೂ ಬೆರೆತಿರುತ್ತದೆ.ಪೂರ್ಣಿಮಾ ಮಾಳಗಿಮನಿ ಅವರ ವೃತ್ತಿ ಜೀವನ ಅವರನ್ನು ವಿಶಿಷ್ಟವಾಗಿ ರೂಪಿಸಿರುವ ಚಿತ್ರಣ ಈ ಕೃತಿಯಲ್ಲಿದೆ. ಪುಟ್ಟ ಹಳ್ಳಿಯಿಂದ ಬಂದ ಪೂರ್ಣಿಮಾ ನವೋದಯ ಶಾಲೆಯಲ್ಲಿ ಓದಿ, ಆಕಸ್ಮಿಕವಾಗಿ ವಾಯುಸೇನೆ ಸೇರಿಕೊಂಡು, ತನಗೆ ಅಪರಿಚಿತವಾದ ಜಗತ್ತಿನಲ್ಲಿ ಅಡ್ಡಾಡಿದ ಪ್ರಸಂಗಗಳು ಈ ನೆನಪುಗಳ ಬುತ್ತಿಯಲ್ಲಿವೆ. ತಮಾಷೆ, ಭಾವುಕತೆ, ದಿಟ್ಟತನ ಮತ್ತು ಬೆರಗು ಹಾಸುಹೊಕ್ಕಾಗಿರುವ ಈ ಕಥನದಲ್ಲಿ ನಡೆದುಬಂದ ದಾರಿಯ ಹೆಜ್ಜೆಗುರುತುಗಳಿವೆ. ಸಹಜ ಕುತೂಹಲದಿಂದ ಓದಿಸಿಕೊಳ್ಳುವ ಕೃತಿ ಇದು. – ಜೋಗಿ
Author
Poornima Malagimani
Binding
Soft Bound
ISBN-13
9788197762710
Number of Pages
160
Publication Year
2025
Publisher
Sawanna Enterprises
Length
22 CMS
Weight
500 GMS
Width
14 CMS
Height
2 CMS
Language
Kannada