Quantity
Product Description
ನಾನು ಇತ್ತೀಚೆಗೆ ಓದಿದ ಅದ್ಭುತ ಪುಸ್ತಕಗಳಲ್ಲಿ ಒಂದು `ವಿಧಿ ಮತ್ತು ವಿಜ್ಞಾನ', ಟಿ ಎಸ್ ವಿವೇಕಾನಂದ ಬರೆದಿದ್ದು. ನಾನು ಮೊದಲಿಗೆ ಇದನ್ನು ಸಾಮಾನ್ಯ ಪುಸ್ತಕ ಎಂದು ಪರಿಗಣಿಸಿದ್ದೆ. ಆದರೆ ಇದು ಸಾಮಾನ್ಯ ಪುಸ್ತಕವಲ್ಲ, ಅತ್ಯಂತ ಅದ್ಭುತ ಪುಸ್ತಕವೂ ಕೂಡ ಹೌದು. ನಮಗೆಲ್ಲ ಕೊಲೆ ಮತ್ತು ಅದನ್ನು ಕಂಡು ಹಿಡಿಯುವ ಮತ್ತು ಅದನ್ನು ಕೋರ್ಟಿನಲ್ಲಿ ಸಾಬೀತು ಮಾಡುವ ಬಗ್ಗೆ ತುಂಬಾ ಕುತೂಹಲವಿರುತ್ತದೆ. ನನ್ನ ಧಾರಾವಾಹಿಗಳಲ್ಲಿ ಅನೇಕವು ಯಶಸ್ವಿಯಾಗಲು ಕಾರಣ ಇಂತಹ ಪಾಟೀಸವಾಲು ಮತ್ತು ಈ ಪಾಟೀಸವಾಲಿನ ಮೂಲಕ ಹೇಗೆ ಕೊಲೆಗಾರರನ್ನು ಹಿಡಿಯಲಾಗುತ್ತಿತ್ತು ಮತ್ತು ಮುಗ್ಧರನ್ನು ಬಿಡಿಸಲಾಗುತ್ತಿತ್ತು ಎಂಬುದರ ಬಗ್ಗೆಯೇ ಇರುತ್ತಿತ್ತು.
ಇದೆಲ್ಲದರಲ್ಲಿ ಒಂದು ಅತ್ಯಂತ ಸ್ಪೆಷಲೈಸ್್ಡ ಮತ್ತು ವಿಶೇಷ ವಿಭಾಗವೆಂದರೆ ಫೋರೆನ್ಸಿಕ್ ವಿಭಾಗ. ವಿವೇಕಾನಂದ ಬರೆದಿರುವುದು ಸಾಮಾನ್ಯ ತನಿಖಾ ವಿಧಾನದಲ್ಲಿ ಸಾಧ್ಯವಾಗದ ಅಪರಾಧಗಳ ಕಗ್ಗಂಟನ್ನು ಈ ವಿಜ್ಞಾನದ ಮೂಲಕ ಹೇಗೆ ಪತ್ತೆ ಮಾಡಲಾಯಿತು ಎಂಬುದನ್ನು ಕುರಿತೇ. ಸಾಕ್ಷ್ಯಾಧಾರಗಳೇ ಇಲ್ಲದ ಕೊಲೆ, ನಾಪತ್ತೆ, ಅತ್ಯಾಚಾರ ಪ್ರಕರಣಗಳನ್ನು ವಿಧಿವಿಜ್ಞಾನದ ನೆರವಿನಿಂದ ಪೊಲೀಸರು ಹೇಗೆ ಪತ್ತೆ ಮಾಡಿದರು ಎಂಬುದನ್ನು ಇಲ್ಲಿನ ಕತೆಗಳು ರೋಚಕವಾಗಿ ವಿವರಿಸುತ್ತವೆ.
ಇಂತಹ ಅನೇಕ ಅದ್ಭುತ ಕತೆಗಳನ್ನು ವಿವೇಕಾನಂದ ಬರೆದಿದ್ದಾರೆ. ಇವನ್ನು ನಾನು ಓದದೇ ಹೋಗದ್ದಿರೆ ಖಂಡಿತ ಏನನ್ನೋ ಕಳೆದುಕೊಳ್ಳುತ್ತಿದ್ದೆ. ಪ್ರತಿಕ್ಷಣವೂ ನಮ್ಮನ್ನು ತುದಿಗಾಲಿನಲ್ಲಿ ನಿಲ್ಲಿಸಿ ಓದಿಸಿಕೊಳ್ಳುವ ಇಲ್ಲಿನ ಕತೆಗಳು ನಿಜಕ್ಕೂ ಶಕ್ತಿಯುತವಾಗಿವೆ. ಇಲ್ಲಿ ವಿಜ್ಞಾನ ಮತ್ತು ಪರಿಭಾಷೆಗಳು ಮಾತ್ರವಲ್ಲ ಅವರ ಭಾಷೆಯಂತೂ ಸರಳ ಮತ್ತು ಅದ್ಭುತ. ಹಾಗೆಯೇ ಅವರು ಬಳಸಿರುವ ತಂತ್ರವಂತೂ ಇನ್ನೂ ರೋಮಾಂಚಕ. ಇಲ್ಲಿ ತಂತ್ರ ಎಂದರೆ ನಾವು ಯಾವುದನ್ನು ಮುಂಚೆ ಹೇಳುತ್ತೇವೆ, ಯಾವುದನ್ನು ಆಮೇಲೆ ಹೇಳುತ್ತೇವೆ, ಹಾಗೆ ಹೇಳುವುದರಿಂದ ಎಂತಹ ಪರಿಣಾಮವಾಗುತ್ತದೆ ಎಂಬುದು ಖಚಿತವಾಗಿ ವಿವೇಕಾನಂದರಿಗೆ ಗೊತ್ತಿದೆ. ಈ ರೂಪದಲ್ಲಿ ವಿವೇಕಾನಂದರ ಬರಹಗಳನ್ನು ಓದಿದಾಗ ನನಗೆ ನಿಜಕ್ಕೂ ಅಚ್ಚರಿ ಮತ್ತು ಮೆಚ್ಚುಗೆಯಾಯಿತು.
ಷೆರ್ಲಾಕ್ ಹೋಮ್ಸೌ ಕಾಲದ ಕತೆಗಳ ಒಬ್ಬ ಷೆರ್ಲಾಕ್ ಹೋಮ್ಸೌನಂತೆ ಪ್ರತಿ ಹೆಜ್ಜೆಯಲ್ಲೂ ಅದನ್ನು ಕೂಲಂಕಷವಾಗಿ ಪರಿಶೀಲಿಸುತ್ತಾ, ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾ, ಪ್ರೇಕ್ಷಕರ ಕುತೂಹಲವನ್ನು ಜೀವಂತವಾಗಿಟ್ಟುಕೊಂಡು, ಅಂತಿಮವಾಗಿ ಅದಕ್ಕೊಂದು ಉಹಾತೀತ ಸಮಾಪ್ತಿ ಹಾಡುವುದು ಇಲ್ಲಿನ ಕತೆಗಳ ತಂತ್ರ ಮತ್ತು ದ್ರವ್ಯ.
Author
Dr T S Vivekananda
Binding
Soft Bound
Number of Pages
196
Publication Year
2025
Publisher
Sawanna Enterprises
Height
2 CMS
Length
22 CMS
Weight
200 GMS
Width
14 CMS
Language
Kannada