Select Size
Quantity
Product Description
ಹಣಕಾಸು ವ್ಯವಸ್ಥೆಯನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಎಲ್ಲಕ್ಕೂ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ನಿಮಗೆಲ್ಲಾ ಗೊತ್ತಿರಲಿ, ಹಣಕಾಸು ವ್ಯವಸ್ಥೆಯಲ್ಲಿ ದೈಹಿಕ ಶ್ರಮದಿಂದ ಸ್ಥಿತಿವಂತರಾಗಲು ಸಾಧ್ಯವಿಲ್ಲ. ಬೆಳಿಗ್ಗೆಯಿಂದ ರಾತ್ರಿ ನಿಷ್ಠೆಯಿಂದ ದುಡಿಯುವುದರಿಂದ ಕೂಡ ಇದು ಸಾಧ್ಯವಿಲ್ಲ. ಇನ್ನು ವಾಮ ಮಾರ್ಗಗಳ ಮೂಲಕ ಇದನ್ನು ಸಾಧಿಸಿಕೊಳ್ಳುವುದು ಸುಲಭದ ಮಾತಲ್ಲ. ಹೀಗಾಗಿ ನಮ ಮುಂದಿರುವ ಏಕೈಕ ಮಾರ್ಗ ಹೂಡಿಕೆ! ಹೌದು ನಮ ಇಂದಿನ ಹಣಕಾಸು ವ್ಯವಸ್ಥೆಯಲ್ಲಿನ ಮೇಲಿನ ಮೆಟ್ಟಿಲುಗಳನ್ನು ಹತ್ತಲು ಹೂಡಿಕೆಯ ಸಹಾಯ ಪಡೆಯದೆ ಅನ್ಯ ಮಾರ್ಗವಿಲ್ಲ. ನಿಮಗೆಲ್ಲಾ ಗೊತ್ತಿರಲಿ ಗಳಿಕೆ ಬಹಳ ಮುಖ್ಯ, ಅದಿಲ್ಲದೆ ಉಳಿಕೆ ಮತ್ತು ಹೂಡಿಕೆಗಳ ಪ್ರಸ್ತಾಪ ಮಾಡಲು ಕೂಡ ಸಾಧ್ಯವಿಲ್ಲ. ಇಂದಿನ ದಿನದಲ್ಲಿ ಉಳಿಕೆ ಮತ್ತು ಹೂಡಿಕೆಯ ನಡುವೆ ಅಗಾಧ ಅಂತರವಿದೆ. ಅದೇನು? ಉಳಿಕೆಯ ಮಾರ್ಗಗಳು, ಹೂಡಿಕೆಯ ಮಾರ್ಗಗಳು ಅಲ್ಲಿ ಎದುರಾಗುವ ಅವಕಾಶ, ಸವಾಲುಗಳೇನು?-ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವಿಲ್ಲಿದೆ. ಅಪಾಯವೆಂದು ಹೂಡಿಕೆ ಮಾಡದೆ ಹಣವನ್ನು ನಿಮ ಬಳಿ ಇಟ್ಟುಕೊಂಡರೂ ಹಣದುಬ್ಬರ ಅದನ್ನು ಕರಗಿಸಿ ಬಿಡುವುದು ಗ್ಯಾರಂಟಿ. ಕೊನೆಪಕ್ಷ ಹೂಡಿಕೆಯಲ್ಲಿ ಹಣವನ್ನು ವೃದ್ಧಿಸಿಕೊಳ್ಳುವ ಸಂಭಾವ್ಯತೆ ಇದೆ.
Weight
300 GMS
Height
1 CMS
Length
22 CMS
Publication Year
2024
Author
Rangaswamy Mookanahalli
Number of Pages
216
ISBN-13
9789393224613
Binding
Soft Bound
Publisher
Sawanna Enterprises
Language
Kannada