Select Size
Quantity
Product Description
650 ವರ್ಷಗಳಿಂದಲೂ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿರುವ ಈ ಕೃತಿ ಇಂಗ್ಲಿಷ್ ಸಾಹಿತ್ಯದ ಪಿತಾಮಹ ಚಾಸರ್ನಿಗೆ ‘ಕ್ಯಾಂಟರ್ಬರಿ ಟೇಲ್ಸ್’ ಬರೆಯಲು ಸ್ಪೂರ್ತಿ ನೀಡಿರುವ ಕೃತಿ ಡಿಕೆಮೆರಾನ್. ಈ ಕಾದಂಬರಿಯ ಕಥಾಹಂದರವೆಂದರೆ ಪ್ಲೇಗ್ನಿಂದ ತಪ್ಪಿಸಿಕೊಳ್ಳಲು ಇಟಲಿಯ ಏಳು ಮಂದಿ ಶ್ರೀಮಂತ ಯುವತಿಯರು ಮೂವರು ಯುವಕರ ಜತೆ ನಗರದಿಂದ ದೂರ ಹಳ್ಳಿಗಳಿಗೆ ತೆರಳುತ್ತಾರೆ. ತಮ್ಮಲ್ಲಿಯೇ ದಿನಕ್ಕೊಬ್ಬರನ್ನು ರಾಜ ರಾಣಿ ಎಂದು ಆಯ್ಕೆ ಮಾಡಿಕೊಳ್ಳುತ್ತ ಅವರು ಸೂಚಿಸಿದ ವಿಷಯದ ಬಗ್ಗೆ ಕಥೆ ಹೇಳುತ್ತಿರುತ್ತಾರೆ. ಯುರೋಪಿನ ನವೋದಯದ ಪ್ರಮುಖ ಕೃತಿಗಳಲ್ಲಿ ಒಂದಾದ ಈ ಪುಸ್ತಕ ಅಂದಿನ ಇಟಾಲಿಯನ್ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತದೆ. ಹೆಚ್ಚಿನ ಕಥೆಗಳು ನೈತಿಕತೆಗೆ ಸವಾಲೊಡ್ಡುವವೇ ಆಗಿದ್ದರೂ ಅವು ಅಂದಿನ ವಾಸ್ತವವೂ ಆಗಿದ್ದವು. ಭಟ್ಟರ ಅನುವಾದವೂ ಸರಳವಾಗಿದ್ದು ಆಸಕ್ತಿಯನ್ನು ಕೆರಳಿಸಲು ಸಫಲವಾಗಿದೆ.
Author
Dr H S Shrimathi
Binding
Soft Bound
Number of Pages
308
Publication Year
2018
Publisher
Kuvempu Bhashaa Bharathi Pradhikaara
Height
3 CMS
Length
22 CMS
Weight
300 GMS
Width
14 CMS
Language
Kannada