Quantity
Product Description
ಬೆರಗಿನ ಆಗರವಾಗಿ ಬೆಡಗಿನ ಖಜಾನೆಯಾಗಿ ಪಾಂಡಿತ್ಯಕ್ಕೆ ಸವಾಲಾಗಿರುವ ಅಲ್ಲಮನ ವಚನಗಳ ನಿರ್ವಚನ ಇಲ್ಲಿದೆ. ವಚನಕಾರರಲ್ಲಿ ನಮ್ಮ ತನುವನ್ನಲ್ಲಾಡಿಸಿ, ಮನವನ್ನಲ್ಲಾಡಿಸಿ ನೋಡುವ ವಚನಕಾರನೆಂದರೆ ಅಲ್ಲಮನೊಬ್ಬನೇ. ಆತನ ವಚನಗಳು ಅನನ್ಯ. ಅಲ್ಲಮ ಸುಲಭವಾಗಿ ಅರ್ಥವಾಗದಿದ್ದರೂ ಆತ್ಮೀಯ ಓದುಗರು ಒಂದು ಸಲ ಓದಿದರೆ ಸಾಕು ಮತ್ತೆ ಮತ್ತೆ ಕಾಡುವ ವಚನಕಾರ. ಅವನ ವಚನಗಳ ಕಾಡಿನಲ್ಲಿ ಒಮ್ಮೆ ಹೊಕ್ಕರೆ ಸಾಕು ತಪ್ಪಿಸಿಕೊಂಡು ಆಚೆ ಬರುವುದು ಕಷ್ಟ. ಬಸವಣ್ಣ ಅಕ್ಕ ಮಹಾದೇವಿಯವರಂತೆ ಅವನು ಅರ್ಥವನ್ನು ಬಿಟ್ಟುಕೊಡುವುದಿಲ್ಲ. ನಮ್ಮನ್ನೂ ಬಿಡುವುದಿಲ್ಲ. ನನ್ನ ಪ್ರಕಾರ ಅವನ ವಚನಗಳಿಗೆ ದಾರ್ಶನಿಕ, ಸಾಮಾಜಿಕ ಅಥವಾ ಸಾಹಿತ್ಯಕ ತಾತ್ಪರ್ಯ ಅಸಾಧ್ಯ ಮತ್ತು ಅಸಾಧು. ಆದರೆ ತಮ್ಮ ತಮ್ಮ ಮಜಲಿನಲ್ಲಿ ತಮ್ಮ ಅನುಭವದ ತಿಳುವಳಿಕೆಯ ಸಂದರ್ಭದೊಳಗಿಟ್ಟು ಅಲ್ಲಮನನ್ನು ಅರ್ಥಮಾಡಿಕೊಳ್ಳುವ ಶಿವಕುಮಾರರವರ ಪ್ರಯತ್ನ ಸ್ವಾಗತಾರ್ಹ.
"ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮರೆಯೆ?" ಇದು ಅಲ್ಲಮನದೇ ಮಾತು. ಆದರೆ ಸಾಮಾನ್ಯರಾದ ನಮಗೆ ಕೊಡೆಗಳನ್ನು ಬಿಟ್ಟು ನೇರವಾಗಿ ಸಿಡಿಲಿಗೆ ಎದೆಯೊಡ್ದುವುದು ಸಾಧ್ಯವಿಲ್ಲ. ಅಲ್ಲಮನೆಂಬ ಸಿಡಿಲನ್ನು ಎದುರುಗೊಳ್ಳುವುದಕ್ಕೆ ಮೊದಲ ಹಂತವಾದ ಸಾಮಾನ್ಯ ತಿಳುವಳಿಕೆಯ ಅರ್ಥ ವಿವರಣೆಯನ್ನು ಶಿವಕುಮಾರರವರು ನೀಡಿದ್ದಾರೆ.
Binding
Soft Bound
Author
Harihar Shivakumar
Number of Pages
167
Publisher
Harivu Books
Publication Year
2026
Height
2 CMS
Length
22 CMS
Weight
200 GMS
Width
14 CMS
Language
Kannada