Product Description
ಬೀಜಗಣಿತವನ್ನು ಏಳು ಕ್ರಿಯೆಗಳ ಅಂಕಗಣಿತವೆಂದು ಪರಿಗಣಿಸಲಾಗಿದೆ. ಕಬ್ಬಿಣದ ಕಡಲೆ ಎಂಬಂತಹ ಬೀಜಗಣಿತವನ್ನು ಸಹ್ಯವಾಗುವಂತೆ ಮನರಂಜನೆಯ ಮೂಲಕ ಪ್ರಸ್ತುತಪಡಿಸಿರುವುದು ಇಲ್ಲಿನ ವಿಶೇಷ. ವಿದ್ಯಾರ್ಥಿ-ಯುವಕರನ್ನು ಈ ಪುಸ್ತಕ ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ವಿವಿಧ ಡಯೊಫಾಂಟೈನ್ ಸಮೀಕರಣಗಳು, ಲಾಗರಿತಂ ಕೋಷ್ಟಕಗಳು, ಖಗೋಳಶಾಸ್ತ್ರದಲ್ಲಿ ಉಪಯೋಗವಾಗುವ ಬೀಜಗಣಿತದ ಘಾತಗಳು ಮಾತ್ರವಲ್ಲದೆ ದೈನಂದಿನ ವ್ಯವಹಾರದಲ್ಲೂ ಎದುರಾಗುವ ಸಮಸ್ಯೆಗಳನ್ನಿಲ್ಲಿ ಸರಳವಾದ ವಿಧಾನದಲ್ಲಿ ಬಿಡಿಸಿಡಲಾಗಿದೆ. ಸಂಕೀರ್ಣ-ಬೃಹತ್ ಗಾತ್ರದ ಸಮಸ್ಯೆಗಳಿಗೆ ಬೀಜಗಣಿತದಲ್ಲಿ ಉತ್ತರವಿದೆಯೆಂದು ನೀವು ಈ ಪುಸ್ತಕದಿಂದ ಅರಿಯಬಲ್ಲಿರಿ. ಗಣಿತದ ಗಾರುಡಿಗನೆಂದು ಪ್ರಸಿದ್ಧನಾದ ರಷ್ಯಾದ ಯಾಕೊವ್ ಪೆರೆಲ್ಮನ್ ಈ ಕೃತಿಯನ್ನು ರಚಿಸಿದ್ದು ಪ್ರಪಂಚದ ಹಲವಾರು ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯವಾಗಿದೆ.