Quantity
Product Description
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನನ್ನ ಶಿಷ್ಯರಾಗಿದ್ದ ಡಾ. ಸಿ. ವೀರಣ್ಣ ಅವರು ಬರೆದ 'ಕನ್ನಡ ಸಾಹಿತ್ಯ - ಚಾರಿತ್ರಿಕ ಬೆಳವಣಿಗೆ'ಯ ಪ್ರಥಮ ಸಂಪುಟವನ್ನು ಬಿಡುಗಡೆ ಮಾಡುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ. ಏಕೆಂದರೆ ಇಲ್ಲಿ ಸಾಹಿತ್ಯದ ಅಧ್ಯಯನಕ್ಕೆ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲಾಗಿದೆ; ಹೊಸ ವಿಧಾನಗಳನ್ನು ಅನುಸರಿಸಲಾಗಿದೆ. ವೀರಣ್ಣನವರು ನನಗಿಂತಲೂ ಮುಂದೆ ಹೋಗಿದ್ದಾರೆ. -ಡಾ. ರಂ. ಶ್ರೀ. ಮುಗಳಿ ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ' ಸರಣಿಯಲ್ಲಿ ಮೂರನೆಯ ಸಂಪುಟ ನಿಮ್ಮ ಕೈಯಲ್ಲಿದೆ. ಈ ಸಂಪುಟದಲ್ಲಿ ಕ್ರಿ. ಶ. 1401ರಿಂದ 1500ರವರೆಗಿನ ಕರ್ನಾಟಕದ ರಾಜಕೀಯ, ಸಾಮಾಜಿಕ ಪರಿಸ್ಥಿತಿಯ ಅವಲೋಕನ ಹಾಗೂ ಆ ಅವಧಿಯಲ್ಲಿ ರಚಿಸಲ್ಪಟ್ಟ ಕನ್ನಡ ಸಾಹಿತ್ಯ ಕೃತಿಗಳ ಅಧ್ಯಯನ ಮಾಡಲಾಗಿದೆ. ಹಿಂದಿನ ಸಂಪುಟಗಳಂತೆಯೇ ಈ ಸಂಪುಟವನ್ನು ಓದುಗರು ಆದರದಿಂದ ಸ್ವೀಕರಿಸುವರೆಂದು ನಂಬಿದ್ದೇವೆ. ಇದನ್ನು ಅತ್ಯಂತ ಶ್ರದ್ಧೆಯಿಂದ ಮತ್ತು ಶ್ರಮವಹಿಸಿ ರಚಿಸಿರುವ ಡಾ| ಸಿ. ವೀರಣ್ಣ ಅವರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು. ಈ ಸಂಪುಟವನ್ನು ಮುದ್ರಣಕ್ಕೆ ಸಿದ್ಧಪಡಿಸಿದ ಡಾ॥ ಆರ್. ಪೂರ್ಣಿಮಾ ಅವರಿಗೆ ಧನ್ಯವಾದಗಳು. ಮುಖಪುಟಕ್ಕೆ ನೆರವಾದ ಕಲಾವಿದ ಮುರಳೀಧರ ರಾಠೋಡ್, ಅಶೋಕ ದೊಮ್ಮಲೂರು, ಟಿ. ಎಸ್. ಗೋಪಾಲ್ ಮತ್ತು ಚಕ್ರಪಾಣಿ ಕೆಂಗೇರಿ ಅವರಿಗೆ ಧನ್ಯವಾದಗಳು
Author
Dr C Veeranna
Binding
Hard Bound
ISBN-13
9788199057326
Number of Pages
712
Publication Year
2025
Publisher
Nava Karnataka Publications Pvt Ltd
Height
5 CMS
Length
22 CMS
Weight
1000 GMS
Width
14 CMS
Language
Kannada