Product Description
ಹೈನುಗಾರಿಕೆ ನಮ್ಮಲ್ಲಿ ಕೃಷಿಗೆ ಪೂರಕವಾಗಿ ಬೆಳೆದುಬಂದಿದೆ. ಆದರೂ ಹಿಂಡು ದನಗಳಿದ್ದರೂ ಮನೆಯಲ್ಲಿ ತೊಟ್ಟು ಹಾಲಿಲ್ಲ ಎಂಬ ಗಾದೆಯೂ ಉಂಟು. ಇದು ಹಿಂದನ ಮಾತಾಯಿತು. ಈಗ ಹೈನುಗಾರಿಕೆ ಒಂದು ವ್ಯವಸ್ಥಿತ ಉದ್ಯಮವಾಗಿ ಬೆಳೆದಿದೆ. ಹಾಲಿನ ಬಳಕೆ ಹೆಚ್ಚಾಗಿದೆ. ಸಾವಿರಾರು ಗ್ರಾಮಗಳಲ್ಲಿ ಹಾಲು ಸಹಕಾರಿ ಸಂಘಗಳಿವೆ. ನಗರವಾಸಿಗಳಿಗೆ ಮುಂಜಾನೆ ಎದ್ದಕೂಡಲೇ ಹಾಲಿನ ದರ್ಶನ ಮಾಡಿಸುವ ವ್ಯವಸ್ಥಿತ ಜಾಲಬಂಧವಿದೆ. ಈ ಕೃತಿ ಹಸು ಸಾಕಲು ಕೊಟ್ಟಿಗೆಯ ರಚನೆಂದ ಹಿಡಿದು ಒಳ್ಳೆಯ ತಳಿಯ ಆಯ್ಕೆ, ಕೃತಕ ಗರ್ಭಧಾರಣೆ, ಗಬ್ಬದ ಹಸುವಿನ, ಕರು ಹಾಕಿದ ನಂತರ ಹಸು-ಕರುವಿನ ಆರೈಕೆ, ಮೇವು ಸಂಗ್ರಹಿಸುವ ವಿಧಾನ ಸೇರಿದಂತೆ ಹಸು ಸಾಕಣೆಯನ್ನು ಲಾಭದಾಯಕವಾಗಿ ಮಾಡಬಹುದಾದ ಎಲ್ಲ ಉಪಯುಕ್ತ ವಿವರಗಳನ್ನು ನೀಡುತ್ತದೆ.