ಮಕ್ಕಳು ಭಗವಂತ ನಮಗಿತ್ತಿರುವ ನ್ಯಾಸವಸ್ತು ಎನ್ನುತ್ತಾನೆ ಖಲೀಲ್ ಗಿಬ್ರಾನ್. ಅಂಥ ಮಕ್ಕಳನ್ನು ವಿಕಾಸದ ಕಡೆ ನಡೆಸಬೇಕಾದ ಹೊಣೆ ಹಿರಿಯರದ್ದು. ಎಚ್.ಎಸ್.ವಿ. ತಮ್ಮ ಸಾಹಿತ್ಯ ಪ್ರತಿಭೆಯ ಮೂಲಕ ಈ ಕೆಲಸವನ್ನು ಪ್ರಾಮಾಣಿಕವಾಗಿ, ಚೊಕ್ಕವಾಗಿ ನಿರ್ವಹಿಸುತ್ತಿದ್ದಾರೆ. ಅವರ ಕವಿತೆಗಳೇ ಆಗಲಿ, ನಾಟಕವೇ ಇರಲಿ, ಎರಡರಲ್ಲೂ ಸಹಜವಾದ ಒಂದು ಗುಣವಿದೆ. ಅದು-ನಾಟಕ ಮತ್ತು ಕಾವ್ಯ ಸಹಜವಾಗಿ ಹೆಣೆದುಕೊಳ್ಳುವ ಗುಣ. ಇವರ ನಾಟಕಗಳಲ್ಲಿ ಬರುವ ಗೀತೆಗಳಂತೂ ಸ್ವಯಂಸ್ಫೂರ್ತವಾದವು.