Quantity
Product Description
ಯಾವುದೇ ನಿಶ್ಚಿತ ಅಪೇಕ್ಷೆಯಿಲ್ಲದೆ ಕೇವಲ ಕುತೂಹಲಕ್ಕಾಗಿ ಆರಂಭವಾದ ಹುಡುಕಾಟವೊಂದು ವಿದ್ಯುತ್ತೆಂಬ ವಿಸ್ಮಯದ ಹುಟ್ಟು ಮತ್ತು ವಿಕಾಸಕ್ಕೆ ಕಾರಣವಾದ ಕಥನ ಅತ್ಯಂತ ರೋಚಕ. ತನ್ನ ಸುತ್ತ ಸಂಭವಿಸುವ ಲೌಕಿಕ ಘಟನೆಗಳ ಸಂಭಾವ್ಯತೆಗೆ ಕಾರಣ ಹುಡುಕಿ ಹೊರಟ ಮನುಷ್ಯಪ್ರಜ್ಞೆ ತನ್ನ ವಿವೇಚನೆ, ಆಲೋಚನೆ, ಪ್ರಯೋಗಶೀಲತೆ, ಏಕಾಗ್ರತೆ, ತಾಳ್ಮೆ ಮತ್ತು ತನ್ಮಯತೆಗಳನ್ನು ತೆತ್ತು ವಿದ್ಯುತ್ತೆಂಬ ಅಗೋಚರ ಚೈತನ್ಯವನ್ನು ಕೈವಶ ಮಾಡಿಕೊಂಡಿತು. ಆಕಸ್ಮಿಕವಾಗಿ ಅನುಭವಕ್ಕೆ ದೊರಕಿದ ಅದೊಂದು ಅದೃಶ್ಯಶಕ್ತಿಯ ಬೆನ್ನು ಹತ್ತದಿದ್ದಿದ್ದರೆ ಜಗತ್ತು ಇಂದು ಹೇಗಿರುತ್ತಿತ್ತೋ ಊಹಿಸಲಸಾಧ್ಯ. ಅದರ ಆವಿಷ್ಕಾರ ಜಗತ್ತನ್ನು ಆಮೂಲಾಗ್ರವಾಗಿ ಬದಲಿಸಿಬಿಟ್ಟಿತು. ಅದು ಮನುಷ್ಯನ ಅಡಿಯಾಳೋ, ಮನುಷ್ಯನೇ ಅದರ ಅಡಿಯಾಳೋ ನಿರ್ಣಯಿಸಲಾಗದ ಮಟ್ಟಿಗೆ ಅದು ಆತನ ಪ್ರಜ್ಞೆ ಮತ್ತು ಪರಿಸರ ಎರಡನ್ನೂ ಆಕ್ರಮಿಸಿದೆ. ಅಣುವಿನಿಂದ ಅಂತರಿಕ್ಷದವರೆಗಿನ ಬ್ರಹ್ಮಾಂಡದ ನಿಗೂಢಗಳನ್ನೆಲ್ಲ ಒಡೆದು ಹಾಕುವತ್ತ ಮುಂದೋಡುತ್ತಿರುವ ಬಾಹ್ಯಾಕಾಶ ವಿಜ್ಞಾನ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ, ಅಂತರ್ಜಾಲ, ಕೃತಕ ಬುದ್ಧಿಮತ್ತೆ, ಜೀವ ವಿಜ್ಞಾನ ಮತ್ತು ಕ್ವಾಂಟಮ್ ವಿಜ್ಞಾನ ಕ್ಷೇತ್ರಗಳ ಶೋಧನೆಗಳು ಕಾಲ ದೇಶಗಳ ಭೌತಿಕ ಅಂತರವನ್ನೇ ಅಳಿಸಿ ಹಾಕುತ್ತಿವೆ. ಈ ಎಲ್ಲ ಸಾಧನೆಗಳ ಹಿಂದಿನ ಏಕಮಾತ್ರ ಮಾಂತ್ರಿಕ ಶಕ್ತಿ ವಿದ್ಯುತ್. ಇಂಥದ್ದೊಂದು ಅಗೋಚರ ಶಕ್ತಿಯ ಶೋಧನೆಯ ಹದನವೇ ಈ 'ಕರೆಂಟಿನ ಕಥೆ'ಯೆಂಬ ಕೃತಿ.
Author
Gajanana Sharma
Binding
Soft Bound
Number of Pages
300
Publication Year
2025
Publisher
Ankitha Pusthaka
Height
4 CMS
Length
22 CMS
Weight
500 GMS
Width
14 CMS
Language
Kannada