Product Description
ಇಂಗ್ಲಿಷಿನಲಿ ಮೊತ್ತಮೊದಲ ಕಾದಂಬರಿ ಎಂದು ಘೋಷಿತವಾದ ಡೇನಿಯಲ್ ಡೀಫೋನ ರಾಬಿನ್ಸನ್ ಕ್ರೂಸೋಗೂ ಮೊದಲೇ ಮೂವತ್ತು ವರ್ಷಗಳಷ್ಟು ಹಿಂದೆಯೇ ಹದಿಮೂರು ಕಾದಂಬರಿಗಳನ್ನು ಬರೆದ ಪ್ರಥಮ ಸ್ತ್ರೀವಾದಿ ಲೇಖಕಿ ಆಫ್ರಾ ಬೆನ್, ಮತದಾನದಂತ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದ "ಸೆನೆಕಾ ಫಾಲ್ಸ್"ನ ಮಹಿಳೆಯರು, ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದ ಸ್ತ್ರೀ ವಿಮೋಚನೆಯ ಸ್ವರವೆತ್ತಿದ ಜಾರ್ಜ್ ಸ್ಯಾಂಡ್, ಎರಡು ದಶಕಗಳ ಅಹಿಂಸಾತ್ಮಕ ಹೋರಾಟ ನಡೆಸಿದ ಸಾನ್ ಸೂಕಿ - ಇನ್ನೂ ಹಲವರು ನಮ್ಮೊಳಗಿನ ಧೈರ್ಯದ ಕಿಡಿಯನ್ನು, ಆತ್ಮವಿಶ್ವಾಸವನ್ನು, ಜಗತ್ತು ಬದಲಿಸುವ ಶಕ್ತಿಯನ್ನು ಜಾಗೃತಗೊಳಿಸಬಲ್ಲರು - ಹೋರಾಟದ ಹಾದಿಯಲ್ಲಿ ಹೆಜ್ಜೆ ಇಟ್ಟ ಈ ಮಹಿಳೆಯರು.