Quantity
Product Description
ಗುರುಪ್ರಸಾದ್ ಕಂಟಲಗೆರೆ ಕನ್ನಡದ ಕಥನ ಪರಂಪರೆಯನ್ನು ಸಮೃದ್ಧಗೊಳಿಸುತ್ತಿರುವ ಕಥೆಗಾರ. ಜನಭಾಷೆಯ-ನುಡಿ ವರಸೆಗಳನ್ನು ಮಾತ್ರವಲ್ಲ ಅದರೊಳಗಿನ ಜೀವದನಿ ಕಳೆಯದಂತೆ ಕತೆಗಟ್ಟುವ ಕಲೆ ಈತನಿಗೆ ಸಿದ್ದಿಸಿದೆ. ತೀವ್ರವಾಗಿ ಬದಲಾಗುತ್ತಿರುವ ಗ್ರಾಮೀಣ ಪರಿಸರ ಮತ್ತು ಬದುಕಿನ ಲಯಗಳನ್ನು ನಿಷ್ಟೂರ ಅನುರಕ್ತಿಯಿಂದ ಅವಲೋಕಿಸುವ ಕುಶಲತೆಯಿಂದ ಮಾತ್ರವಲ್ಲ ನಿರೂಪಣೆಗಳು ನಿಲುವುಗಳಿಂದ ನಿರಾಭರಣವಾಗಿ ಕಂಗೊಳಿಸುತ್ತವೆ. ಕಲ್ಪಕತೆಯ ಆವಾಹನೆಯಿಲ್ಲದೆ ಸರಳ ನಿರೂಪಣಾ ಕ್ರಮವು ಕತೆಗಳ ಆವರಣವನ್ನು ಮಾಯಕವಾಗಿಸುತ್ತದೆ. ಲೋಕ ವ್ಯಾಪಾರವನ್ನು ಕಂಟಲಗೆರೆ ನಿರೂಪಿಸುವಾಗ ಅದರ ಆಳದಲ್ಲಿ ಬಾಬಾಸಾಹೇಬರು ನೀಡಿರುವ ಅರಿವು ಅಂತರ್ಗಾಮಿಯಾಗಿ ಪ್ರವಹಿಸುವ ಪಸೆ ಓದುಗರ ಎದೆಯನ್ನು ತಟ್ಟುತ್ತದೆ. ದಮನಿತರ ಬದುಕಿನ ಬವಣೆಗಳನ್ನು ವಿವರಿಸುವಾಗಲೂ ಅಲ್ಲಿ ಉಸಿರಾಡುತ್ತಿರುವ ಜೀವನೋತ್ಸಾಹವನ್ನು ಗುರುತಿಸುವ ವಿನ್ಯಾಸವು ಅಚ್ಚರಿಯನ್ನುಬ್ಬಿಸುತ್ತದೆ. ಕಳೆದ ನೆನ್ನೆಗಿಂತ ಬರುವ ನಾಳೆ ಒಳಿತಾಗಬಹುದು ಎಂಬ ಭರವಸೆಯನ್ನುಂಟು ಮಾಡುವಂತೆ ಬರೆಯುತ್ತಾರೆ. ಮಾನವೀಯತೆಯಲ್ಲಿ ಆಳವಾದ ನಂಬಿಕೆ ಇಟ್ಟು ಬರೆಯುತ್ತಿರುವ ಗುರುಪ್ರಸಾದ್ರ ಬರಹದಲ್ಲಿ ಸಮಾಜದ ಕಣ್ಣ ಗಾಯವನ್ನು ಕಾಣಿಸುವ ಕತೆಗಾರರಿದ್ದಾರೆ. ಇವರ ಜೀವಪರ
Binding
Soft Bound
Author
Guruprasaad Kaaginele
Number of Pages
200
Publisher
Jeerunde Pusthaka
Publication Year
2025
Height
2 CMS
Length
22 CMS
Weight
200 GMS
Width
14 CMS
Language
Kannada