Select Size
Quantity
Product Description
ಬದುಕು ಹುಟ್ಟುವುದು ನಮ್ಮೊಳಗಿನಿಂದಲೇ ನಮ್ಮ ಆಲೋಚನೆಗಳಿಂದಲೇ. ನಮ್ಮ ಕ್ರಿಯೆಗಳಿಂದಲೇ. ಇದು ಹೊರಗಡೆ ಘಟಿಸುವ ಸಂಗತಿ ಸನ್ನಿವೇಶಗಳಿಂದಲ್ಲ. ಬದಲಾಗಿ ಇದಕ್ಕೆ ನಾವು ನೀಡುವ ಅರ್ಥದಿಂದ. ನಾವು ಗ್ರಹಿಸುವ ರೀತಿಯಿಂದ. ಇಲ್ಲಿ ನಮಗೆ ಆಯ್ಕೆಯಿದೆ. ಯಾವುದನ್ನು ಹೇಗೆ ಗ್ರಹಿಸಬೇಕೆಂಬ ಸ್ವಾತಂತ್ರ್ಯವಿದೆ. ನಮ್ಮ ಬದುಕಿನ ಸೂತ್ರಗಳು ನಮ್ಮ ಕೈಯಲ್ಲೇ ಇವೆ. ನಮ್ಮ ಬದುಕಿನ ಸಂಪೂರ್ಣ ಜವಾಬ್ದಾರಿ ನಮ್ಮದೇ ಆಗಿದೆ. ನಮ್ಮ ಬದುಕಿನ ನಿರ್ಮಾತೃಗಳು, ನಿರ್ದೇಶಕರು ನಾವೇ ಆಗಿದ್ದೇವೆ. ನಮಗೆ ಈ ಸೂಕ್ಷ್ಮ ಅರಿವಾದ ಕ್ಷಣ ಬದುಕು ಫಲಿಸುತ್ತದೆ.
ನಾವು ದೈನಂದಿನವಾಗಿ ಕೈಗೊಳ್ಳುವ ಒಂದು ಸಣ್ಣ ಸರಳ ಸಂಗತಿಯು ಒಂದು ನಿರ್ದಿಷ್ಟ ಕಾಲಮಾನದಲ್ಲಿ ಸಂಚಿತವಾಗಿ ಒಂದು ಪ್ರಬಲ ಶಕ್ತಿಯಾಗಿ ಸಿನರ್ಜಿಯನ್ನು ಪಡೆದುಕೊಳ್ಳುತ್ತದೆ. ಅತ್ಯಂತ ಪ್ರಭಾವಶಾಲಿಯಾಗಿ ಪರಿಣಾಮ ಬೀರುತ್ತದೆ. ನಾವು ರೂಢಿಸಿಕೊಳ್ಳುವ ಒಂದು ಸರಳವಾದ ಅಭ್ಯಾಸವು ನಮ್ಮ ಗಮನಕ್ಕೂ ಬಾರದೆ ಒಂದು ನಿರ್ದಿಷ್ಟ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ರೂಪುಗೊಳ್ಳುತ್ತದೆ. ಎಂದರೆ ನಾವು ನಮ್ಮ ಅದೆಂತಹ ಕಠಿಣವಾದ ಬದುಕನ್ನೂ ಅತ್ಯಂತ ಸುಲಭವಾಗಿ ಹೇಗೆ ಪರಿವರ್ತಿಸಿಕೊಳ್ಳಬಹುದು ಎಂದು ನಮಗೆ ಅರ್ಥವಾಗುತ್ತದೆ.
ಒಬ್ಬ ಸಾಮಾನ್ಯವಾದ ವ್ಯಕ್ತಿ ಅಸಾಮಾನ್ಯ ಯಶಸ್ವೀ ಶಕ್ತಿಯಾಗಿ ಬೆಳೆಯುವ ದಾರಿಯು ಇಷ್ಟೇ ಸರಳವಾಗಿದೆ. ಇಲ್ಲಿ ನಾವು ದೈನಂದಿನವಾಗಿ ನಿರಂತರವಾಗಿ ಕೈಗೊಳ್ಳುತ್ತಿರುವ ಕಾರ್ಯ ಚಟುವಟಿಕೆಗಳೇನು, ಆಲೋಚನೆಗಳೇನು? ನಮ್ಮ ಅಭ್ಯಾಸಗಳು ಯಾವುವು? ಇದರಿಂದ ಉಂಟಾಗುತ್ತಿರುವ ಪರಿಣಾಮಗಳೇನು? ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದೇ ನಾವು ನಮ್ಮ ಯಶಸ್ವೀ ಬದುಕಿಗೆ ಇಡಬೇಕಾದ ಮೊದಲ ಹೆಜ್ಜೆ. ಇಲ್ಲಿಂದಲೇ ನಮ್ಮ ಇಚ್ಛೆಯ ಬದುಕು ಶುರುವಾಗುವುದು.
ಕೆಲವರು ಬದುಕಿನಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಅವರು ನಮ್ಮ ಜೊತೆಗೆ ಇರುವವರು. ನಮ್ಮಂತೆಯೇ ಕಾಣುವವರು. ನಾವೂ ಅವರಂತೆಯೇ ಆಗಬಹುದಾಗಿದೆ. ಬದುಕು ಎಲ್ಲರಿಗೂ ಸಮಾನ ಅವಕಾಶಗಳನ್ನೇ ನೀಡಿದೆ. ಇದನ್ನು ನಾವು ನಮ್ಮ ಸೀಮಿತ ಚೌಕಟ್ಟಿನಿಂದ ಹೊರಬಂದು ಗಮನಿಸಬೇಕಿದೆ. ಈ ಯಾತ್ರೆಯಲ್ಲಿ `ಅನ್ವೇಷಣೆ' ಪುಸ್ತಕವು ನಮ್ಮ ಜೊತೆಗಿದೆ
Publisher
Panchami Media Publications
Publication Year
2022
Number of Pages
152
Binding
Soft Bound
Author
K Shrinivasa Reddy
Height
1 CMS
Length
22 CMS
Width
15 CMS
Weight
200 GMS
Language
Kannada